ಪೋಷಕ ಪಾತ್ರ ಮೂಲಕ ರವಿಚಂದ್ರನ್ ಹೊಸ ಇನ್ನಿಂಗ್ಸ್

ಪ್ರೇಮಲೋಕದ ಕೇಜ್ರಿಸ್ಟಾರ್ ರವಿಚಂದ್ರನ್ ಇತ್ತೀಚೆಗೆ ಪೋಷಕ ಪಾತ್ರ ಮಾಡುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಇನ್ನು ಹೆಸರಿಡದ ಈ ಚಿತ್ರದಲ್ಲಿ ಎಸ್.ನಾರಾಯಣ್, ಕೇಜ್ರಿಸ್ಟಾರ್ ರವಿಚಂದ್ರನ್ ಅವರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ.
ನಿರ್ದೇಶಕ ಎಸ್.ನಾರಾಯಣ್ ಹಾಗೂ ನಟ ರವಿಚಂದ್ರನ್ ಅವರು ರವಿಮಾಮ ಚಿತ್ರದ ನಂತರ, ಅಂದರೆ, ಸುಮಾರು 16 ವರ್ಷಗಳ ಬಳಿಕ ಮತ್ತೆ ಒಟ್ಟಿಗೆ ಕೆಲಸ ಮಾಡಲು ನಿರ್ಧರಿಸಿದ್ದು, ರವಿಚಂದ್ರನ್ ಈ ಪ್ರಾಜೆಕ್ಟ್ ಗೆ ಓಕೆ ಅಂದಿದ್ದಾರಂತೆ.
ಈ ಚಿತ್ರಕ್ಕೆ ಸೋಮವಾರ ಮುಹೂರ್ತ ನೆರವೇರಿದೆ. ನವೆಂಬರ್ 3 ಅಥವಾ 4 ರಂದು ಚಿತ್ರೀಕರಣ ಆರಂಭವಾಗಲಿದೆ.