ಮುಸ್ಲಿಮರಿಗೆ ಶೇ.4 ಟೆಂಡರ್ ಮೀಸಲಾತಿಗೆ ಬಿಜೆಪಿ ವಿರೋಧ: ರಾಜ್ಯಪಾಲರಿಗೆ ಯತ್ನಾಳ್ ಪತ್ರ

ಬೆಂಗಳೂರು: ಸರ್ಕಾರಿ ಗುತ್ತಿಗೆ ಕಾಮಗಾರಿ ಟೆಂಡರಿನಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ನೀಡುವ ಮಸೂದೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧದ ಕಾನೂನು ಜಾರಿಗೆ ಅವಕಾಶ ನೀಡದಂತೆ ಅವರು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದ್ದಾರೆ.
ಪ್ರತಿಪಕ್ಷಗಳ ವಿರೋಧದ ನಡುವೆಯೂ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ(ತಿದ್ದುಪಡಿ) ವಿಧೇಯಕವನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿದ್ದರು. ಈ ವಿಧೇಯಕ ಮಂಡನೆಯಾದ ಬೆನ್ನಲ್ಲೇ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದು, ವಿವಾದಾದ್ಮಕ ಮಸೂದೆಗೆ ಒಪ್ಪಿಗೆ ನೀಡದಂತೆ ಒತ್ತಾಯಿಸಿದ್ದಾರೆ. ಈ ಪಾತ್ರವನ್ನು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
<blockquote class=”twitter-tweet”><p lang=”en” dir=”ltr”>I have written to the Hon'ble Governor Shri <a href=”https://twitter.com/TCGEHLOT?ref_src=twsrc%5Etfw”>@TCGEHLOT</a> Ji requesting him not to provide consent to the contentious amendments to the KTPP (Amendment) Bill 2025 which provides 4% reservation to Muslims in civil contracts as it is unconstitutional. <a href=”https://t.co/3uGF3iEHgH”>pic.twitter.com/3uGF3iEHgH</a></p>— Basanagouda R Patil (Yatnal) (@BasanagoudaBJP) <a href=”https://twitter.com/BasanagoudaBJP/status/1902042705703924105?ref_src=twsrc%5Etfw”>March 18, 2025</a></blockquote> <script async src=”https://platform.twitter.com/widgets.js” charset=”utf-8″></script>