ಕಾರು ಡಿಕ್ಕಿಹೊಡಿಸಿ ವ್ಯಕ್ತಿಯ ಕೊಲೆಗೆ ಯತ್ನ: ಮಹಿಳೆಗೆ ಗಾಯ.. ಮಂಗಳೂರಿನಲ್ಲೊಂದು ಭಯಾನಕ ಕೃತ್ಯ

ಮಂಗಳೂರು: ಬಂದರು ನಗರಿ ಮಂಗಳೂರು ಆಘಾತಕಾರಿ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಜಗಳವಾಡುತ್ತಿದ್ದ ನೆರಮನೆಯವನನ್ನು ಕೊಳ್ಳಲು ಹೋಗಿ ಮಹಿಳೆಯ ಪ್ರಾಣಕ್ಕೆ ಸಂಚಕಾರ ತಂದ ವ್ಯಕ್ತಿ ಇದೀಗ ಜೈಲು ಸೇರಿದ್ದಾನೆ.

A retired #BSNL employee in #Karnataka’s #Mangaluru has been arrested for allegedly attempting to murder his neighbour by intentionally ramming his car into the latter’s motorcycle amid a longstanding dispute.

The accused, 69-year-old #SatishKumarKM, a resident of #Bejai, was… pic.twitter.com/ssdpJxwEvF
— Hate Detector 🔍 (@HateDetectors) March 14, 2025

ಮಂಗಳೂರಿನ ಬಿಜೈ ಸಮೀಪದ ಕಾಪಿಕಾಡ್ ಬಳಿ ನಿವೃತ್ತ BSNL ಅಧಿಕಾರಿ ಎನ್ನಲಾದ ಸತೀಶ್ ಕುಮಾರ್ ಎಂಬವರು ತಮ್ಮ ನೆರೆಮನೆಯ ವ್ಯಕ್ತಿಯ ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ತನ್ನ ಎದುರಾಳಿ ವ್ಯಕ್ತಿ ಬೈಕ್ ನಲ್ಲಿ ಬರುವುದನ್ನೇ ಕಾರಿನಲ್ಲಿ ಕುಳಿತು ಕಾಯುತ್ತಿದ್ದ ಸತೀಶ್ ಕುಮಾರ್, ಆತ ಬೈಕಿನಲ್ಲಿ ಬರುತ್ತಿದ್ದಂತೆಯೇ ಅತಿ ವೇಗದಲ್ಲಿ ಕಾರು ಚಲಾಯಿಸಿ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಈ ಅಪಘಾತದದಲ್ಲಿ ವಾಹನ ಪಾದಚಾರಿ ಮಹಿಳೆಗೆಅಪ್ಪಳಿಸಿದ್ದು, ಆಕೆ ಕಂಪೌಂಡ್ ನಲ್ಲಿ ನೇತು ಬಿದ್ದಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಮಹಿಳೆಯನ್ನು ರಕ್ಷಿಸಿ ಆಸ್ಪತ್ರಗೆ ಕರೆದೊಯ್ದಿದ್ದಾರೆ.
ಆರಂಭದಲ್ಲಿ ಸಹಜ ಅಪಘಾತ ಎಂದು ಭಾವಿಸಲಾಯಿತಾದರೂ, ಪೊಲೀಸ್ ತನಿಖೆ ವೇಳೆ ಇದು ಕೊಲೆ ಯತ್ನ ಎಂಬುದು ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿರುವ ಉರ್ವಾ ಠಾಣೆಯ ಪೊಲೀಸರು ಸತೀಶ್ ಕುಮಾರ್’ನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.