ದೆಹಲಿ ಚುನಾವಣೆ: 27 ವರ್ಷಗಳ ನಂತರ ರಾಜಧಾನಿಯಲ್ಲಿ ಕಮಲಕ್ಕೆ ಅಧಿಕಾರ

0

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿದೆ. ಸುಮಾರು 2 ದಶಕಗಳ ನಂತರ ದೆಹಲಿ ಗೆದ್ದುಗೆ ಏರಿರುವ ಬಿಜೆಪಿ, ಹೊಸ ರಾಜಕೀಯ ದಿಗ್ವಿಜಯಕ್ಕೆ ಸಾಕ್ಷಿಯಾಗಿದೆ.

70 ಸ್ಥಾನಬಲದ ದೆಹಲಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣಾ ಮತಗಳ ಎಣಿಕೆ ಶನಿವಾರ ನಡೆದಿದೆ. ನತಗಳ ಎಣಿಕೆಯುದ್ದಕ್ಕೂ ಮುನ್ನಡೆ ಕಾಯ್ದುಕೊಂಡ ಭಾರತೀಯ ಜನತಾ ಪಕ್ಷ (BJP) 47 ಸ್ಥಾನಗಳನ್ನು ಗೆದ್ದು ಬೀಗಿದೆ.

ಆಡಳಿತಾರೂಢ ಆಮ್ ಆದ್ಮಿ ಪಕ್ಷ (AAP) ಹೀನಾಯ ಸೋಲುಂಡಿದ್ದು, ರಾಜಧಾನಿಯಲ್ಲೇ ಕಾಂಗ್ರೆಸ್ ಪಕ್ಷ ಶೂನ್ಯ ಸಾಧನೆ ಮಾಡಿರುವುದು ದೇಶದ ಇತಿಹಾಸದಲ್ಲೇ ಅಚ್ಚರಿಯ ಫಲಿತಾಂಶವಾಗಿದೆ.

ದೆಹಲಿ ಫಲಿತಾಂಶ ಹೀಗಿದೆ:

  • ಒಟ್ಟು ಸ್ಥಾನಗಳು : 70,

  • ಬಹುಮತಕ್ಕೆ ಅಗತ್ಯ ಸ್ಥಾನಗಳು: 36,

  • ಬಿಜೆಪಿ : 48,

  • ಆಮ್ ಆದ್ಮಿ : 22,

  • ಕಾಂಗ್ರೆಸ್ : 00

Leave a Reply

Your email address will not be published. Required fields are marked *

You may have missed