ಅಮೆರಿಕಾದಲ್ಲಿ ಮತ್ತೊಂದು ವಿಮಾನ ದುರಂತ; ಅನೇಕ ಮನೆಗಳಿಗೆ ಅಗ್ನಿಸ್ಪರ್ಶ

0
Plane- Airplane - Crash - Airport

ವಾಷಿಂಗ್ಟನ್: ವಾಷಿಂಗ್ಟನ್ ಡಿಸಿಯಲ್ಲಿ 67 ಜನರ ಸಾವಿಗೆ ಕಾರಣವಾದ ವಿಮಾನ ಡಿಕ್ಕಿಯಿಂದ ಅಮೆರಿಕ ಚೇತರಿಸಿಕೊಳ್ಳುತ್ತಿರುವಾಗಲೇ, ಶುಕ್ರವಾರ ಸಂಜೆ ಮತ್ತೊಂದು ವಿಮಾನ ಅಪಘಾತ ಸಂಭವಿಸಿದೆ. ಪೆನ್ಸಿಲ್ವೇನಿಯಾ ಪ್ರಾಂತ್ಯದ ಫಿಲಡೆಲ್ಫಿಯಾದಲ್ಲಿ ಲಘು ವಿಮಾನವೊಂದು ಪತನಗೊಂಡು ಹಲವಾರು ಮನೆಗಳಿಗೆ ಬೆಂಕಿ ಹಚ್ಚಿಕೊಂಡಿದೆ.

ಈ ವಿಮಾನದಲ್ಲಿ ಆರು ಜನ ಪ್ರಯಾಣಿಸುತ್ತಿದ್ದು, ಅದು ವೈದ್ಯಕೀಯ ಸೇವಾ ನಿರತ ವಿಮಾನವಾಗಿತ್ತು ಎನ್ನಲಾಗಿದೆ. ಈ ವಿಮಾನ ಪತನದಿಂದಾಗಿ
ನ್ಯೂ ರೂಸ್‌ವೆಲ್ಟ್ ಬೌಲೆವಾರ್ಡ್ ಮತ್ತು ಕಾಟ್‌ಮನ್ ಅವೆನ್ಯೂದಲ್ಲಿ ಹಲವಾರು ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದೆ.

ಶುಕ್ರವಾರ ಸಂಜೆ 6 ಗಂಟೆಯ ನಂತರ ವಸತಿ ಬೀದಿಯಾದ ಕ್ಯಾಲ್ವರ್ಟ್ ಸ್ಟ್ರೀಟ್‌ನ 7200 ಬ್ಲಾಕ್ ಬಳಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ತುರ್ತು ಸೇವೆಗಳ ರವಾನೆಗಳನ್ನು ಸುದ್ದಿ ತಾಣ ಉಲ್ಲೇಖಿಸಿದೆ.

Leave a Reply

Your email address will not be published. Required fields are marked *

You may have missed