ಓಮನ್: ಮಾಜಿ ಸಚಿವ ಸಿ.ಟಿ.ರವಿ ಅವರಿಗೆ “ಗ್ಲೋಬಲ್ ಆಚಿವರ್ಸ್ ಅವಾರ್ಡ್” ಪ್ರಶಸ್ತಿ ಪ್ರದಾನ
ಓಮನ್: ಓಮನ್ ನಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಸಚಿವ ಸಿ.ಟಿ.ರವಿ ಅವರಿಗೆ “ಗ್ಲೋಬಲ್ ಆಚಿವರ್ಸ್ ಅವಾರ್ಡ್” ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಅಪರೂಪದ ಸಾಧಕರನ್ನು ಗುರುತಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಿಸುವ ಉನ್ನತ ಆಶಯದಿಂದ “ವಿಶ್ವವಾಣಿ” “ಸಂಸ್ಥೆ ಕರ್ನಾಟಕ ಸಂಘ ಮಸ್ಕತ್” ಅವರ ಸಹಯೋಗದೊಂದಿಗೆ ಓಮನ್ ನಲ್ಲಿ ನಡೆದ “ಗ್ಲೋಬಲ್ ಆಚಿವರ್ಸ್ ಅವಾರ್ಡ್” ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಮಾಜಿ ಸಚಿವ ಸಿ.ಟಿ.ರವಿ ಅವರಿಗೆ “ಗ್ಲೋಬಲ್ ಆಚಿವರ್ಸ್ ಅವಾರ್ಡ್” ಪ್ರಶಸ್ತಿನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿ.ಟಿ.ರವಿ, ಸಾಧಕರನ್ನು ಗೌರವಿಸುವ ಮಹೋನ್ನತ ಕಾರ್ಯಮಾಡಿದ ವಿಶ್ವವಾಣಿ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.
ಎರಡು ದೇಶಗಳ ಮೈತ್ರಿ ಮತ್ತು ಪರಸ್ಪರ ಸಂಸ್ಕೃತಿಕ ವಿನಿಮಯದ ಆಶಯದಿಂದ ನೆರವೇರಿಸಲಾದ ಮಹಾ ಸಮಾರಂಭದಲ್ಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ವಿಧಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವಾರು ಜನ ಸಾಧಕರೊಂದಿಗೆ, ವಿಧಾನ ಸಭೆಯ ಸಭಾಧ್ಯಕ್ಷ ಯುಟಿ ಖಾದರ್, ಮಸ್ಕತ್ ನ ಕರ್ನಾಟಕ ಸಂಘದ ಅಧ್ಯಕ್ಷ ಎಸ್ ಡಿ ಟಿ ಪ್ರಸಾದ್, ವಿಶ್ವವಾಣಿಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮುಂತಾದವರು ಉಪಸ್ಥಿತರಿದ್ದರು.