ಅಂಕಣಕಾರ ಆರೂರು ಲಕ್ಷ್ಮಣಶೇಟ್ ನಿಧನ

0
lax-shet

ಹಿರಿಯಅಂಕಣಕಾರ ಆರೂರು ಲಕ್ಷ್ಮಣಶೇಟ್ ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು..
ದಕ್ಷಿಣ ಕನ್ನಡ ಜಿಲ್ಲೆಯ ಆರೂರು ಗ್ರಾಮದವರಾದ ಲಕ್ಷ್ಮಣಶೇಟ್ (68) ಹಲವು ವರ್ಷಗಳಿಂದ ಹುಬ್ಬಳ್ಳಿಯಲ್ಲಿ  ವಾಸವಾಗಿದ್ದರು.

ಹಲವು ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದ ಲಕ್ಷ್ಮಣ ಶೇಟ್ , ‘ಟಿಕ್ ಟಿಕ್ ಗೆಳೆಯ ಟಿಕ್ ಟಿಕ್’  ಹಾಗೂ ‘ಒದ್ದೆ ಕಂಗಳ ಪ್ರೀತಿ’ ಎಂಬ ಕಥಾಸಂಕಲನ ಮೂಲಕ ಓದುಗರಿಗೆ ಪ್ರಿಯರೆನಿಸಿದ್ದರು.
. 2007ರಲ್ಲಿ ‘ಒದ್ದೆ ಕಂಗಳ ಪ್ರೀತಿ’ ಎಂಬ ಕಥಾಸಂಕಲನವನ್ನೂ ಪ್ರಕಟಿಸಿದ್ದರು. 2012ರಲ್ಲಿ ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಯು ಬಂದಿತ್ತು

Leave a Reply

Your email address will not be published. Required fields are marked *