ದೆಹಲಿ ಪೊಲೀಸರ ಭರ್ಜರಿ ಬೇಟೆ; 2,000 ಕೋಟಿ ರೂ ಮೌಲ್ಯದ ಕೊಕೇನ್ ವಶ

DElhi Police - Copy

ನವದೆಹಲಿ: ರಾಜಧಾನಿ ದೆಹಲಿ ಪೊಲೀಸರು ಡ್ರಗ್ಸ್ ಮಾಫಿಯಾ ಭರ್ಜರಿ ಬೇಟೆಯಾಡಿದ್ದಾರೆ. ಅತಿ ದೊಡ್ಡ ಮಾದಕ ದ್ರವ್ಯ ದಂಧೆ ಭೇದಿಸಿರುವ ಪೊಲೀಸರು, ಸುಮಾರು 2,000 ಕೋಟಿ ರೂಪಾಯಿ ಮೌಲ್ಯದ 560 ಕೆಜಿ ಕೊಕೇನ್ ವಶಪಡಿಸಿಕೊಂಡಿದ್ದಾರೆ.

ದೆಹಲಿ ಪೊಲೀಸ್ ವಿಶೇಷ ಘಟಕದ ತಂಡ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ ಈ ಕಾರ್ಯಾಚರಣೆ ನಡೆಸಿದ್ದು ನಾಲ್ವರನ್ನು ಬಂಧಿಸಿದ್ದು, 565 ಕಿಲೋಗ್ರಾಂ ಕೊಕೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಾಫಿಯಾ ಜಾಲವು ದೆಹಲಿ ಸಹಿತ ವಿವಿಧ ರಾಜ್ಯಗಳಲ್ಲಿ ಕೊಕೇನ್ ಮಾರಾಟ ಮಾಡಲು ಯೋಜಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

You may have missed