ನರಗುಂದ ಬಳಿ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರ ದುರ್ಮರಣ

accident

ಗದಗ: ಗದಗ್ ಸಮೀಪ ಬಸ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.

ನರಗುಂದ ಸಮೀಪದ ಕೊಣ್ಣೂರ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ.
ಮೃತರೆಲ್ಲರೂ ಹಾವೇರಿ ಮೂಲದವರಾಗಿದ್ದು ಒಂದೇ ಕುಟುಂಬದವರು ಎನ್ನಲಾಗಿದೆ.

ಮೃತರನ್ನು ದಂಪತಿಗಳಾದ 55 ವರ್ಷದ ರುದ್ರಪ್ಪ ಅಂಗಡಿ, 45 ವರ್ಷದ ರಾಜೇಶ್ವರಿ, ಮಕ್ಕಳಾದ 16 ವರ್ಷದ ಐಶ್ವರ್ಯ, 12 ವರ್ಷದ ವಿಜಯ ಎಂದು ಗುರುತಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.