14 ತಿಂಗಳ ಸೆರೆವಾಸ ಅಂತ್ಯ: ಜೈಲಿನಿಂದ ಮುರುಘಾ ಶ್ರೀ ಬಿಡುಗಡೆ

muruga matt seer

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಕಳೆದ 14 ತಿಂಗಳಿಂದ ಚಿತ್ರದುರ್ಗ ಕಾರಾಗೃಹದಲ್ಲಿದ್ದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು ಇಂದು ಜೈಲಿನಿಂದ ಬಿಡುಗಡೆಗೊಂಡರು.

ಚಿತ್ರದುರ್ಗದ ಜೈಲಿನಿಂದ ಹೊರಬಂದ ಶ್ರೀಗಳನ್ನು ಭಕ್ತರು ಸ್ವಾಗತಿಸಿದರು.

ಮೊದಲನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ‌ ಆದೇಶದಂತೆ ಚಿತ್ರದುರ್ಗದ ಎರಡನೇ ಹೆಚ್ಚುವರಿ‌ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ಸಂಬಂಧದ ಪ್ರಕ್ರಿಯೆ ಮುಗಿಸಿ ಶ್ರೀಗಳ ಬಿಡುಗಡೆಗಾಗಿ ಬುಧವಾರ ಮಧ್ಯಾಹ್ನ ಆದೇಶ ಮಾಡಿತ್ತು. ಆದರೆ ಆದೇಶ ಪ್ರತಿ ಕಾರಾಗ್ರಹ ಅಧಿಕಾರಿಗಳಿಗೆ ತಲುಪುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಗುರುವಾರ ಮುರುಘಾ ಶರಣರು ಜೈಲಿನಿಂದ ಬಿಡುಗಡೆಯಾದರು.