ಕೋಳಿಫಾರಂ ನಲ್ಲಿ ನೇಪಾಳದ ನಾಲ್ವರು ಅನುಮಾನಾಸ್ಪದ ಸಾವು
ಬೆಂಗಳೂರು: ರಾಜಧಾನಿ ಬೆಂಗಳೂರು ಸೆರಗಿನಲ್ಲೇ ಇರುವ ದೊಡ್ಡಬಳ್ಳಾಪುರ ಬಳಿ ದಾರುಣ ಘಟನೆ ನಡೆದಿದೆ. ದೊಡ್ಡಬೆಳವಂಗಲ ಹೋಬಳಿಯ ಹೊಲೆಯರಹಳ್ಳಿ ಬಳಿಯ ಕೋಳಿಫಾರಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಮೃತರನ್ನು ನೇಪಾಳ ಮೂಲದವರು ಎಂದು ಗುರುತಿಸಲಾಗಿದೆ. ಕಾಲೇ ಸರೇರಾ, ಲಕ್ಷ್ಮಿ ಸರೇರಾ, ಉಷಾ ಸರೇರಾ ಹಾಗೂ ಪೂಲ್ಸರೇರಾ ಇಂಡೈ=ಉ ಗುರುತಿಸಲಾಗಿದೆ.
ಸ್ಮಶಾನ ರಸ್ತೆಯಲ್ಲಿರುವ ಕೋಳಿ ಫಾರಂ ನಲ್ಲಿ ಸುಮಾರು ಎಂಟು ದಿನದ ಹಿಂದಷ್ಟೇ ಈ ವ್ಯಕ್ತಿಗಳು ಕೆಲಸಕ್ಕೆ ಸೇರಿದ್ದರೆನ್ನಲಾಗಿದೆ. ಕಳೆದ ರಾತ್ರಿ ಶೆಡ್ ಬಾಗಿಲು ಹಾಕಿಕೊಂಡು ಮಲಗಿದವರು ಬೆಳಿಗ್ಗೆ ಮೇಲೆ ಏಳಲೇ ಇಲ್ಲ. ಇವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರೆನ್ನಲಾಗಿದ್ದು ಸಾವಿಗೆ ಕಾರಣ ಏನೆಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.