ಒಂದಾಗ್ತಾರಾ ದರ್ಶನ್-ಸುದೀಪ್; ಸಂಭ್ರಮದ ‘ವೀಡಿಯೊ’ ಕುತೊಹಲ

ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ದರ್ಶನ್ ಮತ್ತು ಕಿಚ್ಚ ಸುದೀಪ್ ಮಾತೆ ಒಂದಾಗುತ್ತಿದ್ದಾರೆಯೇ? ಇಂತಹಾ ಖುಷಿ ಸುದ್ದಿಯೊಂದು ಕನ್ನಡ ಸಿನಿಲೋಕದಲ್ಲಿ ಹರಿದಾಡುತ್ತಿದೆ. ಇದೇ ಸಂದರ್ಭದಲ್ಲಿ ಈ ಇಬ್ಬರೂ ನಟರು ಒಂದೇ ವೇದಿಕೆಯಲ್ಲಿ ಭಾಗವಹಿಸಿ ಕುತೂಹಲದ ಕೇಂದ್ರ ಬಿಂದುವಾಗಿದ್ದಾರೆ.

ಕೆಲವು ವೈಯಕ್ತಿಕ ಕಾರಣಗಳಿಂದ ಮುನಿಸಿಕೊಂಡು ಆರು ವರ್ಷಗಳಿಂದ ದೂರ ಉಳಿದಿರುವ ದರ್ಶನ್ ಹಾಗೂ ಸುದೀಪ್ ಕಳೆದ ರಾತ್ರಿ ಕಳೆದ ರಾತ್ರಿ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸಂಸದೆ ಸುಮಲತಾ ಅಂಬರೀಷ್ ಅವರ ಹುಟ್ಟುಹಬ್ಬ ಕಾರ್ಯಕ್ರಮ ಸಂಭ್ರಮದಲ್ಲಿ ಭಾಗಿಯಾದರು. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸುಮಲತಾ ಮಧ್ಯಸ್ಥಿಕೆಯಲ್ಲಿ ರಾಕ್ ಲೈನ್ ವೆಂಕಟೇಶ್ ಮುಂದಾಳತ್ವದಲ್ಲಿ ಇಬ್ಬರ ಮಧ್ಯೆ ರಾಜಿ ಸಂಧಾನ ನಡೆದಿತ್ತಾ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ವೀಡಿಯೊ ಕೂಡಾ ಕುತೂಹಲ ಹೆಚ್ಚಿಸಿದೆ.