ಕಾಂಗ್ರೆಸ್ ನಾಯಕ, ಮಾಜಿ ಸಂಸದ ದ್ರುವನಾರಾಯಣ್ ವಿಧಿವಶ; ಗಣ್ಯರ ಕಂಬನಿ

0
druvanarayan-mp-300x199

ಬೆಂಗಳೂರು: ರಾಜ್ಯ ರಾಜಕಾರಣದ ಹಿರಿಯ ನಾಯಕ ಮಾಜಿ ಸಂಸದ ಧ್ರುವನಾರಾಯಣ ಅವರು ವಿಧಿವಶರಾಗಿದ್ದಾರೆ. ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷರೂ ಆಗಿರುವ ದ್ರುವನಾರಾಯಣ್ ಅವರಿಗೆ ಏಕಾಏಕಿ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆದಿದೆ. ಆದರೆ ವಿಧಿಯಾಟದ ಎದುರು ಅವರು ಶರಣಾಗಲೇಬೇಕಾಯಿತು ಎಂದು ಅವರ ಆಪ್ತ ಬಂಧುಗಳು ಹೇಳಿದ್ದಾರೆ.

ಇಂದು ಬೆಳಿಗ್ಗೆ ದ್ರುವನಾರಾಯಣ್ ಅವರು ವಿಧಿವಶರಾದ ಸುದ್ದಿ ತಿಳಿದು ಕಾಂಗ್ರೆಸ್ ಕಾರ್ಯಕರ್ತರಷ್ಟೇ ಅಲ್ಲ, ಹಳೇ ಮೈಸೂರು ಭಾಗದ ಪ್ರಮುಖ ನಾಯಕರೆನಿಸಿರುವ ದ್ರುವನಾರಾಯಣ್ ನಿಧನದ ಸುದ್ದಿ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಷ್ಟೇ ಅಲ್ಲ, ನಾಗರಿಕರಲ್ಲಿ ಆಘಾತ ತಂದಿದೆ. ವಿವಿಧ ಪಕ್ಷಗಳ ಮುಖಂಡರು ದ್ರುವನಾರಾಯಣ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Leave a Reply

Your email address will not be published. Required fields are marked *