ರಾಜ್ಯದ ಅತಿ ಎತ್ತರದ 63 ಅಡಿ ಶ್ರೀರಾಮಾಂಜನೇಯ ಮೂರ್ತಿ ಅ‌ 23ರಂದು ಲೋಕರ್ಪಣೆ

ganga arathi- Pooja= puja - Temple

ಬೆಂಗಳೂರು; ರಾಜಾಜಿನಗರದ ಶ್ರೀರಾಮಮಂದಿರದಲ್ಲಿ ಶ್ರೀರಾಮ ಸೇವಾ ಮಂಡಳಿಯಿಂದ ಕರ್ನಾಟಕದ ಅತಿ ಎತ್ತರದ 63 ಅಡಿ ಉದ್ದದ ಶ್ರೀರಾಮಾಂಜನೇಯ ಪ್ರತಿಮೆಯ ಚರ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ಅ. 21 ರಿಂದ ಮೂರು ದಿನಗಳ ಕಾಲ ಅದ್ದೂರಿಯಾಗಿ ನೆರವೇರಲಿದೆ. 23 ರಂದು ವಿಧ್ಯುಕ್ತವಾಗಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ.

ಮಾಧ್ಯಮಗೋಷ್ಟಿಯಲ್ಲಿ, ಮಾಗಡಿ ಕೆಂಪೇಗೌಡ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಡಾ||ಹೆಚ್.ಎಂ.ಕೃಷ್ಣಮೂರ್ತಿ, ಶ್ರೀರಾಮ ಸೇವಾ ಮಂಡಳಿ ಅಧ್ಯಕ್ಷ ಕೆ.ಎಸ್.ಶ್ರೀಧರ್ , ಮಾಜಿ ಬಿಬಿಎಂಪಿ ಸದಸ್ಯ ಮೋಹನ್ ಕುಮಾರ್ ಈ ಕುರಿತು ಮಾಹಿತಿ ನೀಡಿದರು.

ರಾಜ್ಯದ ಪ್ರಮುಖ ಧಾರ್ಮಿಕ ಮುಖಂಡರು, ಧರ್ಮಗುರುಗಳು, ರಾಜಕೀಯ ನೇತರಾರರ ಸಮ್ಮುಖದಲ್ಲಿ, ಭಕ್ತರ ಅಮಿತೋತ್ಸಾಹದ ನಡುವೆ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ ಎಂದರು.
21 ರಂದು ಸಂಜೆ ಗಣಪತಿಪೂಜೆ , ವಿದ್ವಜ್ಜನ ಪ್ರಾರ್ಥನೆ, ದೇವತಾ ಪ್ರಾರ್ಥನೆ, ಕಳಸ ಪ್ರತಿಷ್ಟಾಪನೆ ಕಾರ್ಯ ಶುಭಾರಂಭವಾಗಲಿದೆ. 22 ರಂದು ಬೆಳಗ್ಗೆ 63ಅಡಿಯ ಶ್ರೀರಾಮಾಂಜನೇಯ ಚರಪ್ರತಿಷ್ಟಾನದ ಪೂಜೆ, ಹೋಮ ಸಂಕಲ್ಪವನ್ನು ಸಿದ್ದಗಂಗಾಮಠ ಸಿದ್ದಲಿಂಗಾಮಹಾಸ್ವಾಮೀಜಿ ನೇತೃತ್ವದಲ್ಲಿ ಪ್ರಾರಂಭವಾಗಲಿದೆ ಎಂದವರು ತಿಳಿಸಿದ್ದಾರೆ.

23 ರಂದು ಬೆಳಗ್ಗೆ 11ಗಂಟೆಗೆ ಶ್ರೀರಾಮಾಂಜನೇಯ ಚರ ಪ್ರತಿಷ್ಠಾಪನೆ ಮತ್ತು ಲೋಕರ್ಪಣೆಯನ್ನು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು, ಅದಿ ಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಅವರು ನೆರವೇರಿಸಲಿದ್ದಾರೆ ಎಂದವರು ಮಾಹಿತಿ ನೀಡಿದ್ದಾರೆ.

ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರೈಲ್ವೆ ಮತ್ತು ಜಲಶಕ್ತಿಮ ಯೋಜನಾ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ, ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಎಂ.ರೇವಣ್ಣ, ಶಾಸಕರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಕೆ.ಗೋಪಾಲಯ್ಯ, ರಾಜ್ಯ ಸಭಾ ಸದಸ್ಯ ಸುಧಾಂಶು ತ್ರಿವೇದಿ ಭಾಗವಹಿಸಲಿದ್ದಾರೆ.

ಈ 63 ಅಡಿ ಶ್ರೀರಾಮಾಂಜನೇಯ ಚರಮೂರ್ತಿ ಶಿವಮೊಗ್ಗದ ಶಿಲ್ಪಿ ಜೀವನ್ ರವರು 8ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಿದ್ದಾರೆ. ಧರ್ಮಸ್ಥಳದ ಡಾ. ವಿರೇಂದ್ರಹೆಗಡೆ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನೆರವೇರುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ, ಚಲನಚಿತ್ರ ನಟರುಗಳಾದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಶ್ರೀಮುರುಳಿ ಹಾಗೂ ಬಿಜೆಪಿ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ರವರು, ಆನೇಕ ರಾಜಕೀಯ ಮುಖಂಡರು, ಅದಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಕೆ.ಎಸ್.ಶ್ರೀಧರ್ ತಿಳಿಸಿದರು.

ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳಾದ ಡಾ| ಮಂಜುನಾಥಸ್ವಾಮಿ
ಕೆ. ವೆಂಕಟೇಶ್ ಬಾಬು, ಎಂ.ಜಿ. ಜಯರತ್ನ, ಭಾಗ್ಯಲಕ್ಷ್ಮಿ, ಬಾಬು.ಎನ್ ಎಸ್.ಮಹೇಶ್, ಕೆ.ಆರ್.,ವಿಜಯರಾಘವನ್, ಟಿ.ಪಿ.ಭರತ್,  ಬೈಜುರಾಮ್,ಬಿ.ಎಲ್ ಸುರೇಶ್, ಡಾ.ಆರ್.ರಮೇಶ್, ಎನ್.ಜಯರಾಮ್,ಶಿವರಾಜ್ .ಜೆ.ಶೆಟ್ಟಿ.ಎಂ.ಬಸವರಾಜು ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

You may have missed