ಇಸ್ರೇಲ್ ಮೇಲೆ ಹಿಜಬುಲ್ ಉಗ್ರರ ದಾಳಿ; ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉದ್ವಿಗ್ನ
ಜೆರುಸಲೇಂ: ಮದ್ಯಪ್ರಾಚ್ಯಾದಲ್ಲಿ ಮತ್ತೆ ಸಂಘರ್ಷ ಭು್ಲಗಿದ್ದಿದೆ. ಲೆಬನಾನ್‌ನ ಉಗ್ರಗಾಮಿ ಸಂಘಟನೆ ಹಿಜ್‌ಬುಲ್ಲಾ ಮತ್ತು ಇಸ್ರೇಲ್ ಸೇನೆಯ ನಡುವೆ ಭಾನುವಾರ ಬೆಳಿಗ್ಗೆಯಿಂದ ಬಾರೀ ಸಂಘರ್ಷ ನಡೆದಿದೆ. ದಾಳಿ ಪ್ರತಿದಾಳಿಯಲ್ಲಿ ಭಾರೀ ಹಾನಿಯಾಗಿದ್ದು ಹಲವರು ಗಾಯಗೊಂಡಿದ್ದಾರೆ.
ಭಾನುವಾರ ಉಭಯ ಗಂಪುಗಳ ನಡುವೆ ಮಿಲಿಟರಿ ಸಂಘರ್ಷ ನಡೆದಿದೆ. ಇಸ್ರೇಲ್‌ನ ಉತ್ತರ ಭಾಗದ 11 ಇಸ್ರೇಲಿ ಮಿಲಿಟರಿ ನೆಲೆಗಳನ್ನು ಗುರಿಯಾಗಿರಿಸಿಕೊಂಡು, ಹೆಜ್ಬುಲ್ಲಾ ಪಡೆಯು ಸ್ಫೋಟಕ ತುಂಬಿದ ಸುಮಾರು 320 ರಾಕೆಟ್‌ಗಳು ಮತ್ತು ಬಹು ಡ್ರೋನ್ ಗಳನ್ನು ಉಡಾವಣೆಮಾಡಿದೆ ಎನ್ನಲಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ದೇಶದಾದ್ಯಂತ 48 ಗಂಟೆಗಳ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಮಿಲಿಟರಿ ಪಡೆಯನ್ನು ಸನ್ನದ್ದಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.