ಹೇಮಾವತಿ ನದಿಗೆ ಹಾರಿ ಗುತ್ತಿಗೆದಾರ ಸಾವಿಗೆ ಶರಣು

ಹಾಸನ: ರಾಜ್ಯದಲ್ಲಿ ಗುತ್ತಿಗೆದಾರರ ಸಾವಿನ ಸರಣಿ ಮುಂದುವರಿದಿದ್ದು ಹಾಸನ ಜಿಲ್ಲೆ ಹೊಳೆನರಸೀಪುರ ಬಳಿ ಶುಕ್ರವಾರ ಸಿವಿಲ್ ಗುತ್ತಿಗೆದಾರರೊಬ್ಬರು ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

79 ವರ್ಷದ ಕೆ ಸತ್ತಾರ್ ಎಂಬವರು ಹಣಕಾಸು ವ್ಯವಹಾರದಿಂದಾಗಿ ಸಂಕಸ್ತಾತಕ್ಕೆ ಸಿಲುಕಿದ್ದರೆನ್ನಲಾಗಿದೆ. ಜೊತೆಗೆ ವೈಯಕ್ತಿಕ ಸಮಸ್ಯೆ ಹಾಗೂ ಆರೋಗ್ಯ ಸಮಸ್ಯೆಗಳಿಂದಾಗಿ ನಲುಗಿದ್ದರೆನ್ನಲಾಗಿದೆ. ಈ ಕಾರಣದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

You may have missed