ಹಿಂದೂ ಮುಖಂಡನ ಹತ್ಯೆ ಖಂಡಿಸಿ ಮಡಿಕೇರಿ, ಮೈಸೂರು ಬಂದ್

ಟಿಪ್ಪು ಜಯಂತಿ ವೇಳೆ ನಡೆದ ಗುಂಪು ಘರ್ಷಣೆ ನಡೆದ ನಂತರ ಸರ್ಕಾರದ ವಿರುದ್ದ ಪ್ರತಿಪಕ್ಷಗಳು ಸಮರ ಸಾರಿದೆ.
ಅದರಲ್ಲೂ ಮಡಿಕೇರಿಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡನ ಹತ್ಯೆ ನಡೆದ ನಂತರ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.
ಮಂಗಳವಾರ ಮಡಿಕೇರಿಯಲ್ಲಿ ನಡೆದ ಗುಂಪು-ಘರ್ಷಣೆ ವೇಳೆ ವಿಎಚ್ಪಿ ಮುಖಂಡ ಕುಟ್ಟಪ್ಪರ ಸಾವಿನ ಘಟನೆ ಖಂಡಿಸಿ ಇಂದು ಮೈಸೂರು ನಗರ ಬಂದ್ ಆಚರಿಸಲಾಗುತ್ತಿದೆ.
ಮೈಸೂರು ಬಂದ್ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಬಸ್ ಸಂಚಾರ ವಿರಳವಾಗಿದೆ. ಬಂದ್ ಗೆ ಬಿಜೆಪಿ ಕೂಡ ಬೆಂಬಲ ವ್ಯಕ್ತಪಡಿಸಿದೆ.
ಮೈಸೂರಿನಲ್ಲಿ ಹಿಂದೂ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿದವು. ಬಂದ್ ನಡೆಸುವುದಿಲ್ಲ ಎಂದು ಹಿಂದೂ ಮುಖಂಡರು ಹೇಳುತ್ತಿದ್ದರಾದರೂ, ಮೈಸೂರು ಜಿಲ್ಲೆಯ ಹಲವೆಡೆ ಬಂದ್ ರೀತಿಯ ಸನ್ನಿವೇಶ ಕಂಡುಬಂತು.
