ಸಿನಿ ಲೋಕದ ಗಣ್ಯರನ್ನೂ ಪರಚಿದ ‘ಹುಲಿ ಉಗುರು’ ಪ್ರಕರಣ

actor darshan

ಬೆಂಗಳೂರು: ಹುಲಿ ಉಗುರು ಹೊಂದಿರುವ ಆರೋಪದಲ್ಲಿ ಬಿಗ್ ಬಾಸ್ ಸ್ಪರ್ದಿ ಸೆಲೆಬ್ರೆಟಿಗಳಲ್ಲಿ ನಡುಕ ಉಂಟಾಗಿದೆ. ಇದೇ ವೇಳೆ, ನಟರಾದ ದರ್ಶನ, ಜಗ್ಗೇಶ್, ನಿಖಿಲ್, ರಾಕ್ ಲೈನ್ ವೆಂಕಟೇಶ್ ಅವರೂ ಹುಳು ಉಗುರಿನ ರೀತಿಯ ಪೆಂಡೆಂಟ್ ಧರಿಸಿದ ಫೋಟೋಗಳಿಂದಾಗಿ ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಹಲವು ಗಣ್ಯರಿಗೆ ಅರಣ್ಯಾಧಿಕಾರಿಗಳು ನೋಟೀಸ್ ಜಾರಿಗೊಳಿಸಿದ್ದಾರೆ. ಅಷ್ಟೇ ಅಲ್ಲ, ನಟ ದರ್ಶನ ಅವರ ನಿವಾಸಕ್ಕೆ ಲಗ್ಗೆ ಹಾಕಿರುವ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ನಿಖಿಲ್ ಕುಮಾರಸ್ವಾಮಿ, ಜಗ್ಗೇಶ್, ರಾಕ್ ಲೈನ್ ವೆಂಕಟೇಶ್ ಅವರ ಮನೆಗಳಿಗೂ ತೆರಳಿ ಪರಿಶೀಲನೆ ನಡೆಸಿರುವ ಬೆಳವಣಿಗೆ ತೀವ್ರ ಕುತೂಹಲ ಕೆರಳಿಸಿದೆ.