ಸಂಸತ್ತಿನಲ್ಲಿ ವಕ್ಫ್ ಕೋಲಾಹಲ: ಲೋಕಸಭೆ ಮಾರ್ಚ್ 10ರ ವರೆಗೆ ಮುಂದೂಡಿಕೆ

0
Central Vista - New Parliament Building

ನವದೆಹಲಿ: ವಕ್ಫ್ ಮಸೂದೆಯ ಕುರಿತ ಜೆಪಿಸಿ ವರದಿಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಇಂದು +ಗುರುವಾರ) ಮಂಡಿಸಲಾಯಿತು. ಈ ಸಂದರ್ಭದಲ್ಲಿ ಲೋಕಸಭೆಯಲ್ಲಿ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದ್ದರಿಂದ ಸದನವನ್ನು ಮಾರ್ಚ್ 10ರವರೆಗೆ ಮುಂದೂಡಲಾಯಿತು.

ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ಹಂತದ ಕೊನೆಯ ದಿನವಾದ ಗುರುವಾರ ಲೋಕಸಭೆಯಲ್ಲಿ ಈ ವರದಿಯನ್ನು ಮಂಡಿಸಲಾಯಿತು. ಆ ವೇಳೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತು. ಆಡಳಿತ – ಪ್ರತಿಪಕ್ಷಗಳ ಸಂಸದರ ವಾಕ್ಸಮರದದಿಂದಾಗಿ ಸದನದಲ್ಲಿ ಗದ್ದಲ-ಕೋಲಾಹಲ ಉಂಟಾಯಿತು. ಗದ್ದಲದಿಂದಾಗಿ ಕಲಾಪಕ್ಕೆ ಅಡ್ಡಿಯಾಯಿತು.

ಆರಂಭದಲ್ಲಿ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು. ಸದನ ಮತ್ತೆ ಆರಂಭವಾದಾಗಲೂ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದವು. ಈ ನಡುವೆಯೇ ಬಿಜೆಪಿ ಸಂಸದೆ ಜಗದಂಬಿಕಾ ಪಾಲ್ ಅವರು ವಕ್ಫ್ ಮಸೂದೆಯ ಕುರಿತ ಜೆಪಿಸಿ ವರದಿಯನ್ನು ಮಂಡಿಸಿದರು. ಬಳಿಕ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಮಾರ್ಚ್ 10ರವರೆಗೆ ಮುಂದೂಡಿದರು.

Leave a Reply

Your email address will not be published. Required fields are marked *

You may have missed