‘ಸಂಜು ವೆಡ್ಸ್ ಗೀತಾ 2’ ಚಿತ್ರ ಜನವರಿ 10 ರಂದು ಬಿಡುಗಡೆ
ಶ್ರೀನಗರ ಕಿಟ್ಟಿ, ರಚಿತಾರಾಮ್ ನಟಿಸಿರುವ ‘ಸಂಜು ವೆಡ್ಸ್ ಗೀತಾ 2’ ಚಿತ್ರ ಜನವರಿ 10 ರಂದು ಬಿಡುಗಡೆಯಾಗಲಿದೆ. ಈ ಕುರಿತಂತೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಸಂಜು ವೆಡ್ಸ್ ಗೀತಾ ಸಿನಿಮಾ ಹಿಟ್ ಆದ ನಂತರದಲ್ಲಿ ಇದೀಗ ‘ಸಂಜು ವೆಡ್ಸ್ ಗೀತಾ 2’ ತೆರೆಗೆ ಬರಲು ಸಜ್ಜಾಗಿದೆ. ರಮ್ಯಾ ಅವರ ಸ್ಥಾನದಲ್ಲಿ ರಚಿತಾರಾಮ್ ಗಮನಸೆಳೆಯಲಿದ್ದು, ಈ ಸಿನಿಮಾ ಸ್ವಿಟ್ಜರ್ಲೆಂಡ್‌ನ ಸುಂದರವಾದ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ.
ಚಲಪತಿ ಕುಮಾರ್, ನಾಗಶೇಖರ್ ಮೂವೀಸ್, ಪವಿತ್ರಾ ಇಂಟರ್ನ್ಯಾಷನಲ್ ಮೂವೀಸ್ ಮತ್ತು ಮಹಾನಂದಿ ಕ್ರಿಯೇಷನ್ಸ್ ಸಹಯೋಗದೊಂದಿಗೆ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ನಿರ್ಮಾಣಗೊಂಡಿದೆ. ಸಾಧು ಕೋಕಿಲ ಮತ್ತು ರಂಗಾಯಣ ರಘು ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.