ಶಿವಮೊಗ್ಗ ಅನುಮಾನಾಸ್ಪದ ಬಾಕ್ಸ್ ಪ್ರಕರಣ: ಇಬ್ಬರ ವಶ

police -hoysala-1

ಶಿವಮೊಗ್ಗ: ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದ ಬಾಕ್ಸ್ ಪತ್ತೆ ಪ್ತಕರಣ ಸಂಬಂಧ ಇಬ್ಬರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿಸಿಟಿವಿ ದಾಖಲೆ ಆಧರಿಸಿ ಪತ್ತೆ ಕಾರ್ಯಾಚರಣೆ ಕೈಗೊಂಡಿರುವ ಪೊಲೀಸರು, ಮಾರುತಿ ಓಮಿನಿಯಲ್ಲಿ ಬಂದು ಬಾಕ್ಸ್‌ಗಳನ್ನು ಇಟ್ಟು ತೆರಳಿದ್ದ ಪ್ರಕರಣದಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.‌

ನವೆಂಬರ್ 3 ರಂದು ಈ ಬಾಕ್ಸ್ ಇಡಲಾಗಿತ್ತು. ಬಾಕ್ಸ್ ನಲ್ಲಿ ಸ್ಫೋಟಕ ವಸ್ತುಗಳು ದೊರೆತಿಲ್ಲ. ಆದರೆ ಈ ಅನುಮಾನಾಸ್ಪದ ಬಾಕ್ಸ್‌ನಲ್ಲಿ ಬಾಂಗ್ಲಾದೇಶದ ಹೆಸರಿದೆ. ಹಾಗಾಗಿ ಶಂಕಿತರು ಯಾಕಾಗಿ ಈ ಬಾಕ್ಸ್ ಇಟ್ಟರು, ಅವರ ಉದ್ದೇಶ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.