ಶಾಲೆಯ ಬಚ್ಚಲು ಕೊನೆಯಲ್ಲಿ ಮಗುವಿಗೆ ಜನ್ಮ ನೀಡಿದ 13 ವರ್ಷದ ಬಾಲೆ
ಅವಳು ಎಂಟನೇ ತರಗತಿಯ ಬಾಲೆ. ಆಗಲೇ ಪುಟ್ಟ ಮಗುವಿನ ತಾಯಿ. ಹೈದರಾಬಾದಿನ ಶಾಲೆಯೊಂದರಲ್ಲಿ ಓದುತ್ತಿರುವ 13 ವರ್ಷ ಪ್ರಾಯದ ವಿದ್ಯಾರ್ಥಿನಿ ಶಾಲೆಯ ಬಚ್ಚಲು ಕೊನೆಯಲ್ಲಿ ಮಗುವಿಗೆ ಜನ್ಮ ನೀಡಿ ಅಚ್ಚರಿಗೆ ಕಾರಣ ಆಗಿದ್ದಾಳೆ.
ತೆಲಂಗಾಣದ ಐಟಿ ಸಿಟಿ ಎಂದು ಜನ ಜನಿತವಾಗಿರುವ ಪ್ರದೇಶ ಮಾದಾಪುರದಲ್ಲಿನ ಶಾಲೆಯಲ್ಲಿ ಈ ಪ್ರಸಂಗ ನಡೆದಿದೆ. ಆ ವಿದ್ಯಾರ್ಥಿನಿಗೆ ತರಗತಿ ನಡೆಯುತ್ತಿದ್ದಾಗಲೇ ಹೊಟ್ಟೆ ನೋವು ಕಾಣಿಸಿಕೊಂಡಿತಂತೆ. ಕೂಡಲೇ ಆಕೆ ಬಚ್ಚಲು ಕೊನೆಗೆ ತೆರಳಿದ್ದಾಳೆ. ಅದಾದ ಸ್ವಲ್ಪ ಹೊತ್ತಿನಲ್ಲೇ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾಳೆ.
ಅವಳ ನಡೆ ನುಡಿ ಯಲ್ಲಿ ಯಾರಿಗೂ ಏನೂ ಸಂಶಯ ಬರುತ್ತಿರಲಿಲ್ಲ. ಆ ಶಾಲೆಯಲ್ಲಿ ಸುಮಾರು 20 ಶಿಕ್ಷಕರಿದ್ದರೂ ಆ ವರೆಗೂ ಈ ಬಾಲಕಿ ಗರ್ಭಿಣಿ ಎಂದು ತಿಳಿದಿರಲಿಲ್ಲವಂತೆ ಯಾಕೆಂದರೆ ಆಕೆ ಯಾವಾಗಲು ಶಾಲಿನಿಂದ ಹೊಟ್ಟೆಯನ್ನು ಮುಚ್ಚುತ್ತಿದ್ದಳು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯ ಈ ಸ್ತಿತಿಗೆ ಕಾರಣನಾದ ಯುವಕನನ್ನು ಬಂಧಿಸಿದ್ದಾರೆ. ಯಾಕೆಂದರೆ ಈ ಹುಡುಗಿ ಇನ್ನೂ ಬಾಲಕಿ. ಅತ್ಯಾಚಾರ ಪ್ರಕರಣ ದಾಖಲಿಸಿ ಆತನನ್ನು ಜೈಲಿಗೆ ಪೊಲೀಸರು ಅಟ್ಟಿದ್ದಾರೆ.