ವಿದೇಶಗಳಲ್ಲಿ 10,500 ಕ್ಕೂ ಹೆಚ್ಚು ಭಾರತೀಯರು ಜೈಲಿನಲ್ಲಿದ್ದಾರೆ, 43 ಗಲ್ಲು ಶಿಕ್ಷೆಯ ಆತಂಕದಲ್ಲಿದ್ದಾರೆ.

ನವದೆಹಲಿ: ವಿವಿಧ ದೇಶಗಳ್ಲಲಿ ಸುಮಾರು 10,574 ಭಾರತೀಯರು ಪ್ರಸ್ತುತ ಜೈಲಿನಲ್ಲಿದ್ದಾರೆ, ಅವರಲ್ಲಿ 43 ಮಂದಿ ಮರಣದಂಡನೆ ಶಿಕ್ಷೆ ಎದುರಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸಂಸತ್ತಿಗೆ ತಿಳಿಸಿದೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಅತಿ ಹೆಚ್ಚು ಭಾರತೀಯ ಕೈದಿಗಳು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅಲ್ಲಿ 2,773 ಭಾರತೀಯ ಪ್ರಜೆಗಳು ಪ್ರಸ್ತುತ ಜೈಲಿನಲ್ಲಿದ್ದಾರೆ ಎಂದು ಗಮನಸೆಳೆದರು.
ಸೌದಿ ಅರೇಬಿಯಾದಲ್ಲಿ ಭಾರತ ಮೂಲದ 2,379 ಕೈದಿಗಳಿದ್ದರೆ. ನೇಪಾಳ 1,357 ಕೈದಿಗಳು ಸೆರೆವಾಸದಲ್ಲಿದ್ದರೆ. 795 ಜನರು ಕತಾರ್, 380 ಜನ ಮಲೇಷ್ಯಾದಲ್ಲಿ, 342 ಜನ ಕುವೈತ್, 323 ಜನ ಯುನೈಟೆಡ್ ಕಿಂಗ್‌ಡಮ್, 261 ಜನ ಬಹ್ರೇನ್, 246 ಜನ ಪಾಕಿಸ್ತಾನ, 183 ಜನ ಚೀನಾ ಮತ್ತು ಇತರ ದೇಶಗಳ ಜೈಲುಗಳಲ್ಲಿದ್ದಾರೆ. ಅಂಗೋಲಾ, ಬೆಲ್ಜಿಯಂ, ಕೆನಡಾ, ಚಿಲಿ, ಈಜಿಪ್ಟ್, ಇರಾಕ್, ಜಮೈಕಾ, ಮಾರಿಷಸ್, ಸೆನೆಗಲ್, ಸೀಶೆಲ್ಸ್, ದಕ್ಷಿಣ ಆಫ್ರಿಕಾ, ಸುಡಾನ್, ತಜಿಕಿಸ್ತಾನ್ ಮತ್ತು ಯೆಮೆನ್ ಸೇರಿದಂತೆ ಹಲವಾರು ದೇಶಗಳಲ್ಲಿ ತಲಾ ಒಬ್ಬ ಭಾರತೀಯ ಕೈದಿ ಮಾತ್ರ ಇದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಒಟ್ಟು 10,574 ಜನರಲ್ಲಿ, 43 ಭಾರತೀಯ ಪ್ರಜೆಗಳು ಪ್ರಸ್ತುತ ವಿವಿಧ ದೇಶಗಳಲ್ಲಿ ಮರಣದಂಡನೆಯನ್ನು ಎದುರಿಸುತ್ತಿದ್ದಾರೆ. ಅತಿ ಹೆಚ್ಚು – 21 ಮಂದಿ ಯುಎಇಯಲ್ಲಿದ್ದಾರೆ, ನಂತರ ಸೌದಿ ಅರೇಬಿಯಾ (7), ಚೀನಾ (4), ಇಂಡೋನೇಷ್ಯಾ (3), ಮತ್ತು ಕುವೈತ್ (2). ಒಬ್ಬ ಭಾರತೀಯ ಯುಎಸ್ಎ, ಮಲೇಷ್ಯಾ, ಓಮನ್, ಪಾಕಿಸ್ತಾನ, ಕತಾರ್ ಮತ್ತು ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆ ಎದುರುತ್ತಿದ್ದರೆ.
ಅನೇಕ ದೇಶಗಳಲ್ಲಿ ಕಠಿಣ ಗೌಪ್ಯತೆ ಕಾನೂನುಗಳ ಕಾರಣದಿಂದಾಗಿ, ಜೈಲಿನಲ್ಲಿರುವ ವಿದೇಶಿ ಪ್ರಜೆಗಳ ಬಗ್ಗೆ ಸಮಗ್ರ ವಿವರಗಳು ವ್ಯಕ್ತಿಗಳು ಬಹಿರಂಗಪಡಿಸಲು ಒಪ್ಪದ ಹೊರತು ಯಾವಾಗಲೂ ಲಭ್ಯವಿರುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಕಾನೂನು ನೆರವು, ದೂತಾವಾಸ ಪ್ರವೇಶ ಮತ್ತು ಆರಂಭಿಕ ಬಿಡುಗಡೆ ಅಥವಾ ಸ್ವದೇಶಕ್ಕೆ ಹಿಂದಿರುಗುವ ಪ್ರಯತ್ನಗಳನ್ನು ದ್ವಿಪಕ್ಷೀಯ ಮಾತುಕತೆಗಳು, ನ್ಯಾಯಾಂಗ ಮಧ್ಯಸ್ಥಿಕೆಗಳು ಮತ್ತು ಅಗತ್ಯವಿದ್ದಾಗ ಕ್ಷಮಾದಾನಕ್ಕಾಗಿ ಮನವಿ ಮಾಡುವ ಮೂಲಕ ಕೈಗೊಳ್ಳಲಾಗುತ್ತದೆ. ಹೆಚ್ಚುವರಿಯಾಗಿ, ಭಾರತೀಯ ಸಮುದಾಯ ಕಲ್ಯಾಣ ನಿಧಿಯನ್ನು (ICWF) ಅರ್ಹ ಪ್ರಕರಣಗಳಲ್ಲಿ ಆರ್ಥಿಕ ಮತ್ತು ಕಾನೂನು ನೆರವು ಒದಗಿಸಲು, ವಿಶೇಷವಾಗಿ ಕಾನೂನು ಪ್ರಾತಿನಿಧ್ಯ ಮತ್ತು ವಾಪಸಾತಿ ವೆಚ್ಚಗಳಿಗೆ ಸಹಾಯ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಶ್ರೀಲಂಕಾದ ಬಂಧನದಲ್ಲಿರುವ ತಮಿಳುನಾಡಿನ 27 ಮತ್ತು ಪುದುಚೇರಿಯ ಒಬ್ಬ 28 ಭಾರತೀಯ ಮೀನುಗಾರರ ಬಿಡುಗಡೆಗಾಗಿ ಶ್ರೀಲಂಕಾದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿರುವುದಾಗಿ ಸರ್ಕಾರ ದೃಢಪಡಿಸಿದೆ.