ವಿಜಯಪುರ ಬಳಿ ಸರಣಿ ಅಪಘಾತ; ಆರು ಮಂದಿ ದುರ್ಮರಣ

0
accident

ವಿಜಯಪುರ: ವಿಜಯಪುರ ಜಿಲ್ಲೆ ಮನಗೂಳಿ ಬಳಿ ಬಸ್ಸು-ಕಾರು- ಕಂಟೈನರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಸೋಲಾಪುರ- ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಈ ಅಪಘಾತ ಸಂಭವಿಸಿದೆ.

ಸೋಲಾಪುರದತ್ತ ತೆರಳುತ್ತಿದ್ದ ಮಹೀಂದ್ರಾ ಸ್ಕಾರ್ಪಿಯೋ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಲಾರಿಗೂ ಅಪ್ಪಳಿಸಿದೆ. ಈ ಅಪಘಾತದಲ್ಲಿ ಮಹಿಂದ್ರಾ ಸ್ಕಾರ್ಪಿಯೋ ವಾಹನ ನುಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ತೆಲಂಗಾಣ ಮೂಲದ ಗಡವಾಲದ ಕೆನರಾ ಬ್ಯಾಂಕ್ ಮ್ಯಾನೇಜರ್ ಟಿ.ಭಾಸ್ಕರನ್ ಮಣಿಕಂಠನ್, ಪತ್ನಿ ಪವಿತ್ರ, ಪುತ್ರ ಅಭಿರಾಮ್, ಪುತ್ರಿ ಜ್ಯೋತ್ಸ್ನಾ, ವಿಜಯಪುರ ಮೂಲದ ಚಾಲಕ ವಿಕಾಸ್ ಮಕಾನಿ ಮತ್ತು ಬಸ್ ಚಾಲಕ ಬಸವರಾಜ ರಾಠೋರ್ ಸಾವನ್ನಪ್ಪಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You may have missed