ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ 1,737.68 ಕೋ.ರೂ.ಖರ್ಚು
ನವದೆಹಲಿ: 2024 ರ ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷವು 1,737.68 ಕೋಟಿ ರೂ. ಖರ್ಚು ಮಾಡಿದೆ. ಈ ಕುರಿತಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ಲೆಕ್ಕ ಕೊಟ್ಟಿದೆ.
884.45 ಕೋಟಿ ರೂ ಪಕ್ಷದ ಪ್ರಚಾರಕ್ಕಾಗಿ ಖರ್ಚು, 853.23 ಕೋಟಿ ರೂ ಅಭ್ಯರ್ಥಿಗಳ ವೆಚ್ಚ, ಜಾಹೀರಾತು ಮತ್ತಿತರ ಪ್ರಚಾರಗಳಿಗಾಗಿ ಸುಮಾರು 611.50 ಕೋಟಿ ರೂ ಖರ್ಚು ಮಾಡಲಾಗಿದೆ. ಪೋಸ್ಟರ್‌ಗಳು, ಬ್ಯಾನರ್, ಧ್ವಜ ಮುಂತಾದ ಪ್ರಚಾರ ಸಾಮಗ್ರಿಗಳಿಗಾಗಿ 55.75 ಕೋಟಿ ರೂ, ವೇದಿಕೆ, ಆಸನ, ಧ್ವನಿವರ್ಧಕ ವಾಹನಗಳು ಸೇರಿದಂತೆ ಬಹಿರಂಗ ಪ್ರಚಾರಗಳಿಗಾಗಿ 19.84 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಬಿಜೆಪಿ ತನ್ನ ಖರ್ಚು-ವೆಚ್ಚಗಳ ವರದಿಯಲ್ಲಿ ತಿಳಿಸಿದೆ.