ಲಾಸ್ ಏಂಜಲೀಸ್ ಭೀಕರ ಕಾಡ್ಗಿಚ್ಚು; 40,600 ಎಕರೆ ಪ್ರದೇಶದ ವನ್ಯಸಂಪತ್ತು ನಾಶ
ಲಾಸ್ ಏಂಜಲೀಸ್: ಲಾಸ್ ಏಂಜಲೀಸ್‌ನ ಗ್ರೇಟರ್‌ನಲ್ಲಿ ಕಾಡ್ಗಿಚ್ಚುಗಳನ್ನು ನಿಯಂತ್ರಿಸಲು ಅಗ್ನಿಶಾಮಕ ದಳದವರು ಹಗಲೂ ರಾತ್ರಿ ಕೆಲಸ ಮಾಡುತ್ತಲೇ ಇದ್ದಾರೆ. ಈ ನಡುವೆ ಸುಂಟರ ಗಾಳಿ’ಯ ಮುನ್ಸೂಚನೆಯೂ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಲಾಸ್ ಏಂಜಲೀಸ್ ಕೌಂಟಿಯಲ್ಲಿನ ಕಾಡ್ಗಿಚ್ಚುಗಳ ಪ್ರದೇಶಗಳು ಸೇರಿದಂತೆ ಕರಾವಳಿ ದಕ್ಷಿಣ ಕ್ಯಾಲಿಫೋರ್ನಿಯಾಗೆ ಬೆಂಕಿಯ ಹವಾಮಾನವು ಅಪಾಯಕಾರಿ ರೀತಿಯಲ್ಲಿ ಮುಂದುವರಿಯುತ್ತದೆ ಎಂದು ಅಮೆರಿಕಾದ ರಾಷ್ಟ್ರೀಯ ಹವಾಮಾನ ಸೇವೆ (NWS) ಮಂಗಳವಾರ ತಿಳಿಸಿದೆ.
NWS ಪ್ರಕಾರ, “ವಿಶೇಷವಾಗಿ ಅಪಾಯಕಾರಿ” ಪರಿಸ್ಥಿತಿಯ ಎಚ್ಚರಿಕೆ ಮಂಗಳವಾರ ಜಾರಿಗೆ ಬಂದಿದ್ದು, ಮಧ್ಯಮದಿಂದ ಸ್ಥಳೀಯವಾಗಿ ಬಲವಾದ ಸಾಂಟಾ ಅನಾ ಗಾಳಿಯಿಂದಾಗಿ ಲಾಸ್ ಏಂಜಲೀಸ್ ಮತ್ತು ವೆಂಚುರಾ ಕೌಂಟಿಗಳ ಪ್ರದೇಶಗಳಲ್ಲಿ ಬುಧವಾರ ಮಧ್ಯಾಹ್ನದವರೆಗೆ ಇರುತ್ತದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಲಾಸ್ ಏಂಜಲೀಸ್ ಪ್ರದೇಶದಾದ್ಯಂತ ಸಂಭವಿಸಿದ ಭೀಕರ ಕಾಡ್ಗಿಚ್ಚುಗಳು ಕನಿಷ್ಠ 25 ಜನರನ್ನು ಬಲಿ ತೆಗೆದುಕೊಂಡಿದೆ. 12,300 ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. 40,600 ಎಕರೆಗಳಿಗೂ ಹೆಚ್ಚು ಪ್ರದೇಶದ ವನ್ಯಸಂಪತ್ತು ಸುಟ್ಟುಹೋಗಿವೆ.
ಈ ನಡುವೆ, ಲಾಸ್ ಏಂಜಲೀಸ್ ಕೌಂಟಿಯಲ್ಲಿ ಸುಮಾರು 88,000 ಜನರ ಸ್ಥಳಾಂತರಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ.