ರಾಷ್ಟ್ರೀಯ ತಂಬಾಕು ನಿಯಂತ್ರಣ ತಂತ್ರ; ‘ರಾಹಿಣಿ’ಯಲ್ಲಿ ವಿಶಿಷ್ಠ ಜಾಗೃತಿ ಕಾರ್ಯಕ್ರಮ
ಮಾದಕ ವ್ಯಸನಗಳ ಮೂಲಕ ಯುವಜನರು ದಾರಿತಪ್ಪುತ್ತಿರುವುದು ಕಳವಳಕಾರಿ ಸಂಗತಿ. ಅದರಲ್ಲೂ ಡ್ರಗ್ಸ್, ಗಾಂಜಾದಂತಹಾ ಅಪಾಯಕಾರಿ ಮಾದಕವಸ್ತುಗಳ ಸೇವನೆ ಆರೋಗ್ಯಕ್ಕೂ ಅಪಾಯಕಾರಿ ಎಂಬುದು ಸಾರ್ವತ್ರಿಕ ಸತ್ಯ. ಹೃದಯ, ಶ್ವಾಸಕೋಶ, ಗಂಟಲು ಇತ್ಯಾದಿ ಕ್ಯಾನ್ಸರ್ ರೀತಿಯ ಮಾರಣಾಂತಿಕ ಕಾಯಿಲೆಗಳಿಗೂ ತಂಬಾಕು ಕಾರಣವಾಗುತ್ತದೆ ಎಂಬುದು ವೈದ್ಯ ವಿಜ್ಞಾನ ಕ್ಷೇತ್ರದ ತಜ್ಞರು ಆಗಾಗ್ಗೆ ಎಚ್ಚರಿಕೆ ನೀಡುತ್ತಲೇ ಇದ್ದಾರೆ.
ಈ ಎಚ್ಚರಿಕೆಯ ಘಂಟೆಯನ್ನು ಬೆಂಗಳೂರು ಹೊರವಲಯದ ದೊಡ್ಡಬಳ್ಳಾಪುರದ ರಾಹಿಣಿ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮತ್ತೊಮ್ಮೆ ಭಾರಿಸಿ ನಾಡಿನ ಗಮನಸೆಳೆದರು. ದೊಡ್ಡಬಳ್ಳಾಪುರ ಬಳಿ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ವಿಶ್ವ ತಂಬಾಕು ರಹಿತ ದಿನ – 2023″ ಅನ್ನು ವಿಶಿಷ್ಠವಾಗಿ ಆಚರಿಸಲಾಯಿತು.
ರಾಹಿಣಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ. ಆರೋಗ್ಯಧಿಕಾರಿಗಳು, ವೈದ್ಯಕೀಯ ಶಿಕ್ಷಣದ ಪ್ರಾದ್ಯಾಪಕರು, ವಿದ್ಯಾರ್ಥಿ ಸಮೂಹ ಭಾಗಿಯಾಗಿದ್ದರಿಂದ ಅಭಿಯಾನವೂ ಅರ್ಥಪೂರ್ಣವೆನಿಸಿತು.
ಆರೋಗ್ಯಾಧಿಕಾರಿ ಡಾ. ಪರಮೇಶ್ವರ್ ಅವರು ಈ ಜಾಥಾವನ್ನು ಉದ್ಘಾಟಿಸಿದರು. ಎಲ್ಲಾ ಅಂಗಡಿ ಮುಂಗಟ್ಟುಗಳಿಗೆ, ಕಚೇರಿಗಳಿಗೆ ತೆರಳಿ ಸಾರ್ವಜನಿಕರಲ್ಲಿ ತಂಬಾಕು ಕುರಿತು ಜಾಗೃತಿ ಮೂಡಿಸಿಲಾಯಿತು.
ಈ ವೇಳೆ ತಂಬಾಕು ನಿಯಂತ್ರಣ ಘಟಕದ ಸಲಹೆಗಾರರಾದ ಪದ್ಮಾ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕರಾದ ಕರಿಯಪ್ಪ, ಮನು, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ಸುಜಾತ, ನಾಗಮ್ಮ, ಸಿಬ್ಬಂದಿ ಉಪಸ್ಥಿತರಿದ್ದರು.