ಮಧ್ಯಪ್ರಾಚ್ಯ ಸಂಘರ್ಷ; ಹಮಾಸ್’ನಿಂದ ಇಸ್ರೇಲ್ ಒತ್ತೆಯಾಳುಗಳ ನರಮೇಧದ ಬೆದರಿಕೆ

ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದಿಂದಾಗಿ ಮಧ್ಯ ಪ್ರಾಚ್ಯ ಪ್ರಕ್ಷುಬ್ಧಗೊಂಡಿದೆ. ಪ್ಯಾಲೆಸ್ತೀನ್ ಬೆಂಬಲಿತ ಹಮಾಸ್ ಉಗ್ರರ ಪೈಶಾಚಿಕ ದಾಳಿಗೆ ಪ್ರತಿಯಾಗಿ ಮಿಲಿಟರಿ ಕಾರ್ಯಾಚರಣೆಗೆ ಇಸ್ರೇಲ್ ತಯಾರಿ ನಡೆಸಿದೆ. ಸುಮಾರು ಮೂರು ಲಕ್ಷ ಸೈನಿಕರ ಪದೇ ಇಸ್ರೇಲ್ ಬೆಂಬಲಿಸಿ ಸಮರದ ಅಖಾಡಕ್ಕೆ ಇಳಿಯಲು ಸಜ್ಜಾಗಿದೆ.

ಇದೇ ವೇಳೆ, ಇಸ್ರೇಲ್ ದಾಳಿ ನಡೆಸಿದರೆ ತಮ್ಮ ಮೊಟ್ಟೆಯಲ್ಲಿರುವ ಮಂದಿಯ ನರಮೇಧ ನಡೆಸುವ ಎಚ್ಚರಿಕೆಯನ್ನು ಹಮಾಸ್ ನೀಡಿದೆ. ಗಾಜಾ ಪಟ್ಟಿಯಲ್ಲಿ ನಾಗರಿಕರ ಮೇಲೆ ದಾಳಿ ನಡೆದರೆ ತಮ್ಮ ವಶದಲ್ಲಿರುವ ಇಸ್ರೇಲಿ ನಾಗರಿಕರನ್ನು ಕೊಲ್ಲುತ್ತೇವೆ ಎಂದು ಹಮಾಸ್ ಉಗ್ರರು ಬೆದರಿಕೆ ಹಾಕಿದ್ದಾರೆ.

ಈ ನಡುವೆ, ಮಧ್ಯಪ್ರಾಚ್ಯ ಸಮರದಲ್ಲಿ ಈವರೆಗೆ 1,600ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. 143 ಮಕ್ಕಳು ಮತ್ತು 105 ಮಹಿಳೆಯರು ಸೇರಿದಂತೆ 704 ಜನರು ಸಾವನ್ನಪ್ಪಿದ್ದಾರೆ. ಇದೇ ವೇಳೆ, ಹಮಾಸ್ ಉಗ್ರರ ದಾಳಿಯಿಂದಾಗಿ ಇಸ್ರೇಲ್‌ನಲ್ಲಿ ಸುಮಾರು 900 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

You may have missed