ಭೀಕರ ಪ್ರವಾಹಕ್ಕೆ ಹಿಮಾಲಯ ರಾಷ್ಟ್ರ ತತ್ತರ; ನೂರಕ್ಕೂ ಹೆಚ್ಚು ಮಂದಿ ಬಲಿ

flood -rain

ಕಠ್ಮಂಡು: ಭೀಕರ ಪ್ರವಾಹಕ್ಕೆ ಹಿಮಾಲಯ ರಾಷ್ಟ್ರ ನೇಪಾಳ ತತ್ತರಿಸಿದೆ. ನಿರಂತರ ಮಳೆಯಿಂದಾಗಿ ಪ್ರವಾಹ ಉಲ್ಬಣಗೊಂಡಿದ್ದು ನೂರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.

ಮಳೆಯಿಂದಾಗಿ ಸಂಭವಿಸಿದ ವಿವಿಧ ಪ್ರಕರಣಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 112ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹದಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ನೂರಾರು ಕುಟುಂಬಗಳು ನೆಲೆ ಕಳೆದುಕೊಂಡಿವೆ. ಅಸಂಖ್ಯ ಮಂದಿ ನಾಪತ್ತೆಯಾಗಿದ್ದಾರೆ. 3,000 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

You may have missed