ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ; ಭಕ್ತಕೋಟಿ ಭವ್ಯ ಆಧ್ಯಾತ್ಮಿಕ ಸ್ವಾಗತ ನೀಡಿದ ಯೋಗಿ
ನವದೆಹಲಿ: ಪ್ರಯಾಗ್‌ರಾಜ್‌ನಲ್ಲಿ ಸೋಮವಾರ ಮಹಾಕುಂಭ 2025 ಪ್ರಾರಂಭವಾಗುತ್ತಿದ್ದಂತೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪೌಷ ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಭಕ್ತಕೋಟಿಯನ್ನು ಭವ್ಯ ಆಧ್ಯಾತ್ಮಿಕ ಸಭೆಗೆ ಸ್ವಾಗತಿಸಿದ್ದಾರೆ.
ಭಕ್ತರು, ಸಂತರು ಮತ್ತು ಕಲ್ಪವಾಸಿಗಳನ್ನು ಭವ್ಯ ಆಧ್ಯಾತ್ಮಿಕ ಸಭೆಗೆ ಸ್ವಾಗತಿಸಿರುವ ಸಿಎಂ ಯೋಗಿ, ಮಹಾಕುಂಭ ಪ್ರತಿನಿಧಿಸುವ ನಂಬಿಕೆ ಮತ್ತು ಆಧುನಿಕತೆಯ ಸಂಗಮ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ‘X’ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ‘ಪೌಷ ಪೂರ್ಣಿಮೆಯ ಶುಭಾಶಯಗಳು. ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಭೆ ‘ಮಹಾಕುಂಭ’ ಪವಿತ್ರ ನಗರವಾದ ಪ್ರಯಾಗ್‌ರಾಜ್‌ನಲ್ಲಿ ಪ್ರಾರಂಭವಾಗುತ್ತಿದೆ.
ವೈವಿಧ್ಯತೆಯಲ್ಲಿ ಏಕತೆಯನ್ನು ಅನುಭವಿಸಲು, ಧ್ಯಾನ ಮಾಡಲು ಮತ್ತು ನಂಬಿಕೆ ಮತ್ತು ಆಧುನಿಕತೆಯ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಬಂದಿರುವ ಎಲ್ಲಾ ಪೂಜ್ಯ ಸಂತರು, ಕಲ್ಪವಾಸಿಗಳು ಮತ್ತು ಭಕ್ತರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಲಾಗುತ್ತದೆ. ಗಂಗಾ ಮಾತೆ ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಲಿ’ ಎಂದಿದ್ದಾರೆ. ‘ಸನಾತನ ಹೆಮ್ಮೆ-ಮಹಾ ಕುಂಭ ಉತ್ಸವ” ಎಂದವರು ಬರೆದುಕೊಂಡಿದ್ದಾರೆ.