ಪಾಕಿಸ್ತಾನದ ಡ್ರೋನ್ ದಾಳಿಯನ್ನು ಭಾರತದ ಸೇನೆ ವಿಫಲಗೊಳಿಸಿದ್ದೇ ರೋಚಕ

0
Indian Army- Op[eration Sindhoor- 1

ಜಮ್ಮು: ನಾಲ್ಕು ರಾಜ್ಯಗಳನ್ನು ಗುರಿಯಾಗಿಸಿ ಶುಕ್ರವಾರ ರಾತ್ರಿ ಪಾಕಿಸ್ತಾನ ನಡೆಸಿದ ಡ್ರೋನ್ ದಾಳಿಯನ್ನು ಭಾರತದ ಸೇನೆ ವಿಫಲಗೊಳಿಸಿದ್ದೇ ರೋಚಕ.

ಜಮ್ಮು-ಕಶ್ಮೀರ, ರಾಜಸ್ತಾನ, ಪಂಜಾಬ್, ಗುಜರಾತ್ ರಾಜ್ಯಗಳ ಹಲವು ನಗರಗಳನ್ನು ಗುರಿಯಾಗಿಸಿ ಪಾಕಿಸ್ತಾನ ಡ್ರೋನ್ ದಾಳಿ ಕೈಗೊಂಡಿದೆ. ಆದರೆ ಭಾರತದ ಸೇನೆ ಪಾಕಿಸ್ತಾನದ ನೂರಾರು ಡ್ರೋನ್ ಗಳನ್ನೂ ಹೊಡೆದುರುಳಿಸಿದೆ. ಶುಕ್ರವಾರ ಸಂಜೆ ದಕ್ಷಿಣ ಕಾಶ್ಮೀರದ ಶ್ರೀನಗರ ವಿಮಾನ ನಿಲ್ದಾಣ ಮತ್ತು ಆವಂತಿಪೋರಾ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ಡ್ರೋನ್ ದಾಳಿಯನ್ನು ವಿಫಲಗೊಳಿಸಲಾಯಿತು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ 26 ಸ್ಥಳಗಳಲ್ಲಿ ಶಂಕಿತ ಶಸ್ತ್ರಸಜ್ಜಿತ ಡ್ರೋನ್‌ಗಳು ಪತ್ತೆಯಾಗಿವೆ. ಪಂಜಾಬಿನ ಫಿರೋಜ್ ಪುರದಲ್ಲಿ ಮನೆಯೊಂದರ ಮೇಲೆ ಪಾಕಿಸ್ತಾನದ ಡ್ರೋನ್ ಅವಶೇಷ ಬಿದ್ದಿದ್ದು, ಆ ಮನೆಗೆ ಹಾನಿಯಾಗಿದ್ದಲ್ಲದೆ ಮೂವರು ಗಾಯಗೊಂಡಿದ್ದಾರೆ. ಜಮ್ಮು-ಕಾಶ್ಮೀರ ಪಂಜಾಬ್, ರಾಜಸ್ಥಾನ ರಾಜ್ಯಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ದಾಳಿಯನ್ನು ಭಾರತ ತನ್ನ S-400 ವಾಯು ರಕ್ಷಣಾ ವ್ಯವಸ್ಥೆಯಿಂದ ತಡೆದಿದ್ದು, ಪಾಕಿಸ್ತಾನದ ಶಾಸ್ತ್ರಗಳನ್ನು ನಾಶ ಮಾಡಿದೆ.

ಮಿಲಿಟರಿ ಸ್ಥಳಗಳನ್ನು ಮಾತ್ರವಲ್ಲದೆ ನಾಗರೀಕರನ್ನೂ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಇದರಿಂದ ಕೆರಳಿರುವ ಭಾರತ ಸೇನೆ ರಾತ್ರಿಯಿಡೀ ಕಾರ್ಯಾಚರಣೆಯಲ್ಲಿ ತೊಡಗಿತ್ತು.

Leave a Reply

Your email address will not be published. Required fields are marked *

You may have missed