ನಾಡಿನಾದ್ಯಂತ ಮಕರ ಸಂಕ್ರಾಂತಿ ವೈಭವ; ದೇವಕಾಲಯಗಳಲ್ಲಿ ವಿಶೇಷ ಕೈಂಕರ್ಯ
ಬೆಂಗಳೂರು: ನಾಡಿನಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಉತ್ತರಾಯಣ ಪರ್ವಕಾಲವನ್ನು ಸ್ವಾಗತಿಸುವ ಕೈಂಕರ್ಯ ಎಲ್ಲೆಡೆ ಸಾಗಿದೆ.
ಎಲ್ಲೆಲ್ಲೂ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರುತ್ತಿದೆ. ಅದರಲ್ಲೂ ಅಯ್ಯಪ್ಪ ದೇಗುಲಗಳಲ್ಲಿ ಮಕರ ಸಂಕ್ರಾಂತಿಯನ್ನು ವಿಶೇಷ ವೈಭವ ರೀತಿಯಲ್ಲಿ ಅಕ್ಕಿಗರಿಸಲಾಗುತ್ತಿದೆ.
ಬೆಂಗಳೂರಿನ ಗವಿಪುರದಲ್ಲಿರುವ ಗವಿಗಂಗಾಧರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನೆರವೇರುತ್ತಿದ್ದು ಇಂದು ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸುವ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ. ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಅಭೀಷೇಕ, ನೆರವೇರಿದ್ದು, ದೇಗುಲಗಳು ಭಕ್ತಸಮೂಹದಿಂದ ತುಂಬಿವೆ.