ನವೆಂಬರ್ ಅಂತ್ಯಕ್ಕೆ ಕಿರಣ್ ರಾಜ್ ನಟಿಸಿರುವ ‘ಮೇಘ’ ಬಿಡುಗಡೆ
ಕಿರಣ್ ರಾಜ್ -ಕಾಜಲ್ ಕುಂದರ್ ನಟಿಸಿರುವ ‘ಮೇಘ’ ಚಿತ್ರ ನವೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ. ಈ ಚಿತ್ರವನ್ನು ಚರಣ್ ನಿರ್ದೇಶಿಸಿದ್ದಾರೆ.
ಶೋಭರಾಜ್, ಸುಂದರ್ ವೀಣಾ, ಸಂಗೀತಾ ಮುಂತಾದ ಕಲಾವಿದರು ‘ಮೇಘ’ ಚಿತ್ರದಲ್ಲಿ ನಟಿಸಿದ್ದಾರೆ. ಹನುಮಂತೇಗೌಡ, ಗಿರೀಶ್ ಶಿವಣ್ಣ, ತರಂಗ ವಿಶ್ವ ಅವರ ನಟನೆಯೂ ಗಮನಸೆಳೆಯಲಿದೆ. ಡಾ. ವಿ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ಫ್ರಾಂಕ್ಲಿನ್ ರಾಕಿ ಅವರ ಹಿನ್ನೆಲೆ ಸಂಗೀತ ಹಾಗೂ ಜೋಯಲ್ ಸಕ್ಕರಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.