ಟೆಂಡರ್‌ನಲ್ಲಿ ಭಾಗಿಯಾಗದ ಕೆಎಂಎಫ್‌; ಸರ್ಕಾರದ ನಡೆ ಬಗ್ಗೆ ಅನುಮಾನ

0
metro-light

ಬೆಂಗಳೂರು: ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆ ತೆರೆಯುವ ಟೆಂಡರ್‌ನಲ್ಲಿ ಕೆಎಂಎಫ್‌ ಭಾಗವಹಿಸಿದೇ ಇರುವುದು ಸರ್ಕಾರದ ಕುತಂತ್ರ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

ಮೆಟ್ರೋ ನಿಲ್ದಾಣಗಳಲ್ಲಿನ ಮಳಿಗೆ ಟೆಂಡರ್‌ನಲ್ಲಿ ಕೆಎಂಎಫ್‌ ಭಾಗಿಯಾಗದ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅಶೋಕ್, ಒಂದು ಕಡೆ ರೈತರಿಗೆ ಹಾಲಿನ ಸಹಾಯಧನ ನೀಡಿಲ್ಲ. ಇನ್ನೊಂದು ಕಡೆ ಕೆಎಂಎಫ್‌ಗೆ ಅವಕಾಶ ನೀಡಿಲ್ಲ. ಸರ್ಕಾರದ ತಪ್ಪಿನಿಂದಾಗಿ ರೈತರಿಗೆ ಅನ್ಯಾಯವಾಗಿದೆ ಹಾಗೂ ಬೇರೆಯವರಿಗೆ ಅವಕಾಶ ಸಿಕ್ಕಿದೆ ಎಂದರು.

ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಕಾಂಗ್ರೆಸ್‌ ಒಡೆಯುತ್ತಿದೆ. ಸಿದ್ದರಾಮಯ್ಯ ಬಂದ ನಂತರ ಎಲ್ಲರನ್ನೂ ಒಡೆಯುತ್ತಿದ್ದಾರೆ. ಬೆಂಗಳೂರನ್ನು ಒಡೆಯುವುದನ್ನು ಜನರು ಸಹಿಸುವುದಿಲ್ಲ. 1 ಕೋಟಿ ಜನರನ್ನು ಆಳಲು ಒಬ್ಬ ಮೇಯರ್‌ಗೆ ಸಾಧ್ಯವಿಲ್ಲ ಎಂದು ಭಾವಿಸಿದ್ದಾರೆ. ಬೆಂಗಳೂರಿನ ಅಭಿವೃದ್ಧಿಗೆ ಹಣವಿಲ್ಲ. ಈ ತಪ್ಪನ್ನು ಮರೆಮಾಚಲು ಮೂರು ಭಾಗ ಮಾಡುವ ತೀರ್ಮಾನ ಮಾಡಲಾಗಿದೆ. ಗುಂಡಿ ಬಿದ್ದ ರಸ್ತೆ, ಕಸದ ಸಮಸ್ಯೆಯನ್ನು ಜನರು ಮರೆಯುವಂತೆ ಮಾಡಲು ಹೊಸ ವಿಚಾರಗಳನ್ನು ಪ್ರಸ್ತಾಪಿಸಲಾಗುತ್ತಿದೆ. ಬೆಂಗಳೂರನ್ನು ಒಡೆದರೆ, ಜನರ ಶಾಪ ತಟ್ಟಲಿದೆ ಎಂದವರು ಹೇಳಿದರು.

Leave a Reply

Your email address will not be published. Required fields are marked *