ಗಣರಾಜ್ಯೋತ್ಸವ ಹಿನ್ನಲೆ; ಪುಷ್ಪ ಪ್ರದರ್ಶನಕ್ಕೆ ಬೆಂಗಳೂರಿನ ಲಾಲ್ ಭಾಗ್ ಸಜ್ಜು
ಗಣರಾಜ್ಯೋತ್ಸವ ಅಂಗವಾಗಿ ಪುಷ್ಪ ಪ್ರದರ್ಶನಕ್ಕೆ ಬೆಂಗಳೂರಿನ ಲಾಲ್ ಭಾಗ್ ಉದ್ಯಾನವನ ಸಜ್ಜುಗೊಳ್ಳುತ್ತಿದೆ. ಜನವರಿ 16ರಿಂದ 26ರವೆರೆಗೆ ಪುಷ್ಪ ಪ್ರದರ್ಶನ ನಡೆಯಲಿದೆ..
ಲಾಲ್ ಭಾಗ್ ಉದ್ಯಾನವನ ಅಭಿವೃದ್ಧಿಗೆ ಶ್ರಮಿಸಿದ ಸ್ವಾತಂತ್ರ್ಯಪೂರ್ವದಲ್ಲಿ ತೋಟಗಾರಿಕೆ ನಿರ್ದೇಶಕರಾಗಿದ್ದ, ಗುಸ್ತವ್ ಹೆರ್ಮನ್ ಕೃಂಬಿಗಲ್ ಅವರ ಜರ್ಮನಿಯ ಮನೆ ಈ ಬಾರಿಯ ಪ್ರಮುಖ ಆಕರ್ಷಣೆಯಾಗಿದೆ.
ಗಾಜಿನ ಮನೆಯ ಮಧ್ಯಭಾಗದಲ್ಲಿ ಕೃಂಬಿಗಲ್ ಅವರ ಜರ್ಮನಿಯ ನಿವಾಸದಲ್ಲಿ ಪುಷ್ಪ ಐಔಏಂ ನಿರ್ಮಿಸಲಾಗಿದೆ. ಇದಕ್ಕಾಗಿ ಎರೂಡವರೆ ಲಕ್ಷ ಹೂಗಿಡಗಳನ್ನು ಬಳಸಿಕೊಳ್ಳಲಾಗಿದೆ. 17 ಅಡಿ ಎತ್ತರದ 4 ಪುಷ್ಪ ವೃಕ್ಷಗಳನ್ನು ನಿರ್ಮಿಸಲಾಗಿದ್ದು, ಇದಕ್ಕಾಗಿ ಮೂರು ಸಾವಿರಕ್ಕೂ ಹೆಚ್ಚು ಪಾಯಿನ್ ಸಿಟಿಯಾ ಹೂಗಳನ್ನು ಬಳಸಿಕೊಳ್ಳಲಾಗಿದೆ.
15 ಅಡಿ ಅಗಲ 13 ಅಡಿ ಎತ್ತರದ ಮೂರು ಪುಷ್ಪ ಹೃದಯಗಳನ್ನು ನಿರ್ಮಿಸಲಾಗಿದ್ದು 50ಕ್ಕೂ ಹೆಚ್ಚು ವಿವಿಧ ಹೂಗಳನ್ನು ಬಳಸಿಕೊಳ್ಳಲಾಗಿದೆ. ಫ್ಲೋಪಲ್ ಡೂಮ್ಸ್ ತೂಗುವ ಹೂಕುಂಡಗಳು, ಈ ಬಾರಿಯ ಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿವೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.. ಪ್ರದರ್ಶನಕ್ಕೆ 5ರೂಪಾಯಿ ಹಾಗೂ ಮಕ್ಕಳಿಗೆ 10 ರೂಪಾಯಿ ಪ್ರವೇಶ ದರವನ್ನು ನಿಗದಿಪಡಿಸಲಾಗಿದೆ..