‘ಕೇಂದ್ರದ ಅನುದಾನ ಸಧ್ಭಳಕೆ ಮಾಡದ ಸರ್ಕಾರ ಯಾವ ಪುರುಷಾರ್ಥಕ್ಕೆ ಅಧಿಕಾರದಲ್ಲಿರಬೇಕು?’; ಬಿಜೆಪಿ ಪ್ರಶ್ನೆ
ಬೆಂಗಳೂರು: ಕೇಂದ್ರದಿಂದ ಅನುದಾನ ಬಂದಿಲ್ಲ ಎಂದು ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಆಕ್ರೋಶ ಹೊರಹಾಕಿದೆ. ಕೇಂದ್ರದಿಂದ ಅನುದಾನ ಬಂದಿಲ್ಲ ಎಂದು ಸುಳ್ಳಾಡುವ ಸಿಎಂ ಸಿ ಎಂ ಸಿದ್ದರಾಮಯ್ಯ ಅವರು, ಕೇಂದ್ರದಿಂದ ಬಂದ ಅನುದಾನವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಯೋಗ್ಯತೆ ಸರ್ಕಾರಕ್ಕಿಲ್ಲ ಎಂಬುದು ಸಾಬೀತುಪಡಿಸಿದ್ದಾರೆ ಎಂದು ಬಿಜೆಪಿ ಹೇಳಿದೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ಕೊಟ್ಟ ಅನುದಾನವನ್ನು ಖರ್ಚು ಮಾಡಿ ಸಧ್ಭಳಕೆ ಮಾಡದ ನಿಮ್ಮ ಸರ್ಕಾರ ಯಾವ ಪುರುಷಾರ್ಥಕ್ಕೆ ಅಧಿಕಾರದಲ್ಲಿರಬೇಕು ಎಂದು ಎದಿರೇಟು ನೀಡಿದೆ.
ಕೇಂದ್ರ ಸರ್ಕಾರದ ಮೇಲೆ ಸುಳ್ಳು ಆಪಾದನೆ ಮಾಡುವ ನಿಮ್ಮ ಟೂಲ್ ಕಿಟ್ ಅನ್ನು ಬದಿಗಿಟ್ಟು, ಮೊದಲು ಅನುದಾನವನ್ನು ಸದ್ಭಳಕೆ ಮಾಡುವತ್ತ ಗಮನಹರಿಸಿ ಎಂದು ಬಿಜೆಪಿ ಹೇಳಿದೆ.
ಕೇಂದ್ರದಿಂದ ಅನುದಾನ ಬಂದಿಲ್ಲ ಎಂದು ಸುಳ್ಳಾಡುವ ಸಿಎಂ @siddaramaiah ಅವರೆ,
ಕೇಂದ್ರದಿಂದ ಬಂದ ಅನುದಾನವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಯೋಗ್ಯತೆ ನಿಮ್ಮ ಸರ್ಕಾರಕ್ಕಿಲ್ಲ ಎಂಬುದು ಸಾಬೀತಾಗಿದೆ.
ಕೊಟ್ಟ ಅನುದಾನವನ್ನು ಖರ್ಚು ಮಾಡಿ ಸಧ್ಭಳಕೆ ಮಾಡದ ನಿಮ್ಮ ಸರ್ಕಾರ ಯಾವ ಪುರುಷಾರ್ಥಕ್ಕೆ ಅಧಿಕಾರದಲ್ಲಿರಬೇಕು..??
ಕೇಂದ್ರ ಸರ್ಕಾರದ ಮೇಲೆ… pic.twitter.com/CfXegZjdOW
— BJP Karnataka (@BJP4Karnataka) January 19, 2025