ಕಾಸರಗೋಡು: ಗಂಟಲಲ್ಲಿ ಪಿಸ್ತಾದ ಸಿಪ್ಪೆ ಸಿಲುಕಿ ಮಗು ಸಾವು

0
police night2

ಕಾಸರಗೋಡು: ಮಗುವೊಂದು ತನ್ನ ಗಂಟಲಲ್ಲಿ ಪಿಸ್ತಾದ ಸಿಪ್ಪೆ ಸಿಲುಕಿದ್ದರಿಂದ ಸಾವನ್ನಪಿರುವ ಘಟನೆ ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿ ನಡೆದಿದೆ.

ಕುಂಬಳೆ ಭಾಸ್ಕರ ನಗರ ನಿವಾಸಿ ಅನ್ವರ್ ಎಂಬವರ ಪುತ್ರ ಅನಸ್ ಮೃತಪಟ್ಟ ಬಾಲಕ. ಈ ಎರಡು ವರ್ಷದ ಬಾಲಕ ಶನಿವಾರ ಪಿಸ್ತಾವನ್ನು ತಿನ್ನುತ್ತಿದ್ದಾಗ ಅದರ ಸಿಪ್ಪೆ ಗಂಟಲಲ್ಲಿ ಸಿಲುಕಿಡೇ ಎನ್ನಲಾಗಿದೆ. ಮನೆಯವರು ಸಿಪ್ಪೆಯ ಒಂದು ತುಂಡನ್ನು ಹೊರ ತೆಗೆದು ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರು. ವೈದ್ಯರ ತಪಾಸಣೆ ವೇಳೆ ಮಗುವಿನ ಗಂಟಲಲ್ಲಿ ಯಾವುದೇ ವಸ್ತುಗಳು ಸಿಲುಕಿರುವುದು ಕಂಡುಬರಲಿಲ್ಲ. ಹಾಗಾಗಿ ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೆ, ಭಾನುವಾರ ಬೆಳಿಗ್ಗೆ ಬಾಲಕನಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕೊಡಲಿಲ್ಲ.

ಮಗುವಿನ ತಂದೆ ಅನ್ವರ್ ವಿದೇಶದಲ್ಲಿದ್ದು, ಇತ್ತೀಚೆಗಷ್ಟೇ ರಜೆಯಲ್ಲಿ ಊರಿಗೆ ಬಂದಿದ್ದು, ರಜೆ ಮುಗಿಸಿ ಕೆಲ ದಿನಗಳ ಹಿಂದೆಷ್ಟೇ ವಿದೇಶಕ್ಕೆ ಮರಳಿದ್ದರು.

Leave a Reply

Your email address will not be published. Required fields are marked *

You may have missed