ಕರಾವಳಿಯ ನಗರಗಳಲ್ಲೂ ಹದಗೆಟ್ಟ ವಾಯು ಗುಣಮಟ್ಟ
MANGALURU :The National Highways Authority of India (NHAI) has fully equipped toll plazas along the four-laned National Highway 66 between Talapady and KundapuraOne of the toll plazas at Talapady near Mangaluru.
ಬೆಂಗಳೂರು: ರಾಜ್ಯದಲ್ಲಿ ರಾಜಧಾನಿ ಮಾತ್ರವಲ್ಲದೆ ಕರಾವಳಿ ನಗರಗಳಾದ ಮಂಗಳೂರು ಮತ್ತು ಉಡುಪಿಗಳಲ್ಲೂ ವಾಯು ಗುಣಮಟ್ಟ ಹದಗೆಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಮಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 190ಕ್ಕೆ ತಲುಪಿದೆ. ಉಡುಪಿ ನಗರದಲ್ಲಿ ಇದು 181 ದಾಖಲಾಗಿದ್ದು, ಬೆಳಗಾವಿಯಲ್ಲಿ 182 ಆಗಿದೆ. ಮಲೆನಾಡು ಭಾಗದ ಶಿವಮೊಗ್ಗಯಲ್ಲೂ ಎಕ್ಯೂಐ 181ಕ್ಕೆ ಏರಿಕೆಯಾಗಿದೆ.
ಕೆಲ ದಿನಗಳ ಹಿಂದೆ ತೀವ್ರ ಕಳಪೆ ಮಟ್ಟ ತಲುಪಿದ್ದ ಬೆಂಗಳೂರು ನಗರದ ಎಕ್ಯೂಐ ಬುಧವಾರ 156ಕ್ಕೆ ಇಳಿಕೆಯಾಗಿದೆಯಾದರೂ, ಇನ್ನೂ ‘ಮಧ್ಯಮ–ಕಳಪೆ’ ವಲಯದಲ್ಲೇ ಇದೆ.
ಇತರೆ ಪ್ರಮುಖ ನಗರಗಳ ಸ್ಥಿತಿಯೂ ಚಿಂತಾಜನಕವಾಗಿದೆ. ಮೈಸೂರು – 158, ಕಲಬುರ್ಗಿ – 144, ಹುಬ್ಬಳ್ಳಿ – 159 ಹಾಗೂ ವಿಜಯಪುರ – 152 ಎಕ್ಯೂಐ ದಾಖಲಾಗಿದೆ.
ಗಾಳಿಯ ಗುಣಮಟ್ಟ ಕುಸಿತದಿಂದ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳು ಹೆಚ್ಚುವ ಸಾಧ್ಯತೆ ಇರುವುದರಿಂದ ಮಕ್ಕಳು, ವೃದ್ಧರು ಹಾಗೂ ಆರೋಗ್ಯ ಸಮಸ್ಯೆ ಇರುವವರು ಎಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.
