ಕರಾವಳಿಯಲ್ಲಿ ಕ್ಷಿಪ್ರ ಕ್ರಮ; ಅಪರಾಧ ಹಿನ್ನೆಲೆಯುಳ್ಳವರ ಗಡಿಪಾರು
ಮಂಗಳೂರು : ವಿಧಾನಸಭಾ ಚುನಾವಣೆಗೆ ತಯಾರಿ ನಡೆದಿರುವಂತೆಯೇ ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸ್ ಇಲಾಖೆ ಕೂಡಾ ಬಿಗಿ ಕ್ರಮ ಕೈಗೊಂಡಿದೆ. ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪರಾಧ ಹಿನ್ನೆಲೆ ಯುಳ್ಳ 11 ಮಂದಿಯನ್ನು ಗಡಿಪಾರು ಮಾಡಿ ಶುಕ್ರವಾರ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಸೆಪ್ಟೆಂಬರ್ 06 ರವರೆಗೆ ಗಡಿಪಾರು ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ರೌಡಿ ಹಿನ್ನೆಲೆಯಲ್ಲಿರುವವರ ವಿರುದ್ದ ಜಿಲ್ಲಾಡಳಿತ ಈ ‘ಗಡಿಪಾರು’ ಅಸ್ತ್ರ ಪ್ರಯೋಗಿಸಿದೆ.
ಯಾರೆಲ್ಲ ಗಡಿಪಾರಿ?
-
ಬಂಟ್ವಾಳ ನಗರ ಠಾಣಾ ವ್ಯಾಪ್ತಿ: ನಜೀರ್‌ಕುಣಿಗಲ್ (ಗೋಳ್ತಮಜಲು ಗ್ರಾಮ),ಇಬ್ರಾಹಿಂ ಖಲೀಲ್ (ವಳಚ್ಚಿಲ್ ಪದವು
-
ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿ:
ಜಯರಾಜ್ ರೈ (ಬಡಗನ್ನೂರು) -
ಪುತ್ತೂರು ನಗರ ಠಾಣಾ ವ್ಯಾಪ್ತಿ:
ಇಬ್ರಾಹಿಂ (ಕಬಕ, ನೆಹರೂ ನಗರ), ಹಕೀಮ್ ಕೂನ್ರಡ್ಕ (ಕೆಮ್ಮಿಂಜೆ),) -
ಬೆಳ್ಳಾರೆ ಠಾಣಾ ವ್ಯಾಪ್ತಿ:ರೋಷನ್ (ಕಡಬ, ಬರೆಪ್ಪಾಡಿ),ಪ್ರಸಾದ್ (ಸವಣೂರು),
-
ಉಪ್ಪಿನಂಗಡಿ ಠಾಣಾ ವ್ಯಾಪ್ತಿ:ಅಬೂಬಕ್ಕರ್ ಸಿದ್ದಿಕ್ (ನೆಕ್ಕಿಲಾಡಿ, ಪುತ್ತೂರು),ಉಬೈದ್ ಬಿ.ಎಸ್ (ಉಪ್ಪಿನಂಗಡಿ),ತಸ್ಲೀಂ (ಬೋವು ಮಜಲು, ಬೆಳ್ತಂಗಡಿ) ,
-
ಧರ್ಮಸ್ಥಳ ಠಾಣಾ ವ್ಯಾಪ್ತಿ:
ಕಿರಣ್ ಕುಮಾರ್ (ಶಿಶಿಲ))