ಇಸ್ರೇಲಿ ದಾಳಿಯಿಂದ ಇರಾನ್ ಪರಮಾಣು ಸೌಲಭ್ಯಗಳಿಗೆ ಅಪಾಯ: IAEA ಮುಖ್ಯಸ್ಥರ ಎಚ್ಚರಿಕೆ

0

ವಿಶ್ವಸಂಸ್ಥೆ: ಇರಾನ್‌ನ ಪರಮಾಣು ತಾಣಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯು ಭವಿಷ್ಯದಲ್ಲಿ ಗಂಭೀರ ಪರಮಾಣು ಅಪಾಯಕ್ಕೆ ಕಾರಣವಾಗಬಹುದು ಎಂದು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ಮಹಾನಿರ್ದೇಶಕ ರಾಫೆಲ್ ಗ್ರೋಸಿ ಎಚ್ಚರಿಸಿದ್ದಾರೆ.

ಬುಧವಾರ ನಡೆದ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ದಾಳಿಯಿಂದಾಗಿ ನಟಾಂಜ್ ಹಾಗೂ ಎಸ್ಫಹಾನ್ ತಾಣಗಳಲ್ಲಿ ರಾಸಾಯನಿಕ ಮಾಲಿನ್ಯದ ಆತಂಕವಿದೆ ಎಂದರು. “ಈಗಾಗಲೇ ಸಾರ್ವಜನಿಕರಿಗೆ ಹಾನಿಯಾಗಿಲ್ಲವಾದರೂ, ಮುಂದೆ ಅಂಥ ಅಪಾಯ ಸಂಭವಿಸಬಹುದಾಗಿದೆ,” ಎಂದು ಗ್ರೋಸಿ ಎಚ್ಚರಿಸಿದರು.

“ಬುಶೆಹರ್ ಮೇಲೆ ದಾಳಿ ಉಗ್ರ ಪರಿಣಾಮಕಾರಿಯಾಗಿದೆ”

ಬುಶೆಹರ್‌ನ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ದಾಳಿ ಸಂಭವಿಸಿದರೆ, ಪರಿಸರಕ್ಕೆ ಅತ್ಯಧಿಕ ವಿಕಿರಣಶೀಲತೆಯ ಹರಡುವಿಕೆಯಾಗಬಹುದು ಎಂದು ಅವರು ಎಚ್ಚರಿಸಿದರು. “ಸುತ್ತಲಿನ ಪ್ರದೇಶಗಳನ್ನು ಖಾಲಿ ಮಾಡಬೇಕು, ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಆಹಾರ ಪೂರೈಕೆಯನ್ನೂ ನಿಯಂತ್ರಿಸಬೇಕಾದ ಪರಿಸ್ಥಿತಿ ಉಂಟಾಗಬಹುದು,” ಎಂದು ಗ್ರೋಸಿ ಹೇಳಿದರು.

ಫೋರ್ಡೋ ತಾಣದಲ್ಲಿ ಯಾವುದೇ ಹಾನಿಯ ಮಾಹಿತಿ ಇಲ್ಲ ಎಂದಾದರೂ, ಎಸ್ಫಹಾನ್‌ನಲ್ಲಿ ನಾಲ್ಕು ಕಟ್ಟಡಗಳು ನಾಶವಾಗಿದೆ. ನಟಾಂಜ್‌ನಲ್ಲಿಯೂ ರಾಸಾಯನಿಕ ಮಾಲಿನ್ಯದ ಆತಂಕ ಇದೆ. ಟೆಹ್ರಾನ್‌ನ ಸಂಶೋಧನಾ ರಿಯಾಕ್ಟರ್‌ ವಿರುದ್ಧದ ದಾಳಿಯು ನಗರವಾಸಿಗಳಿಗೆ ನೇರ ಅಪಾಯವಾಗಬಹುದು ಎಂದೂ ಅವರು ಎಚ್ಚರಿಸಿದರು.

“ಪರಮಾಣು ತಾಣಗಳ ಮೇಲೆ ದಾಳಿ ಅಸ್ವೀಕಾರಾರ್ಹ”

“ಪರಮಾಣು ಸೌಲಭ್ಯಗಳ ಮೇಲೆ ಸಶಸ್ತ್ರ ದಾಳಿಗಳು ಎಂದಿಗೂ ನಡೆಯಬಾರದು. ಇವು ಜೀವಕ್ಕೆ ಅಪಾಯವೆಂಬಷ್ಟೇ ಅಲ್ಲ, ಭವಿಷ್ಯದ ರಾಜತಾಂತ್ರಿಕ ಪರಿಹಾರಗಳಿಗೆ ತೊಂದರೆಯಾದರೂ,” ಎಂದು ಗ್ರೋಸಿ ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *