ಅರ್ಜುನ್ ಜನ್ಯ ಕನಸು ‘45’ ಸಿನಿಮಾ, ಶಿವಣ್ಣ-ಉಪ್ಪಿ ಕಮಾಲ್
ಅರ್ಜುನ್ ಜನ್ಯ ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ‘45’ ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯವಾಗಿದ್ದು ಬಿಡುಗಡೆಗೆ ತಯಾರಿ ನಡೆದಿದೆ.
ದೀಪಾವಳಿ ಹಬ್ಬದ ನಡುವೆಯೇ ಟೀಸರ್ ಬಿಡುಗಡೆಯಾಗಿದ್ದು ‘45’ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದ್ದು, ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಒಟ್ಟಿಗೆ ನಟಿಸಿದ್ದಾರೆ. ರಾಜ್ ಬಿ ಶೆಟ್ಟಿ ಅವರೂ ಕಾಣಿಸಿಕೊಂಡಿದ್ದಾರೆ. ಶಿವರಾಜ್‌ಕುಮಾರ್ ಮತ್ತು ಉಪೇಂದ್ರ ಅವರ ಫರ್ಸ್ಟ್ ಲುಕ್ ಅನಾವರಣಗೊಳಿಸುವ ‘45’ ಸಿನಿಮಾ ಬಗ್ಗೆ ಕುತೂಹಲವನ್ನು ಚಿತ್ರ ತಂಡ ಹೆಚ್ಚಿಸಿದೆ.