ಲಂಚಾವತಾರ: ಇಬ್ಬರು ಇಡಿ ಅಧಿಕಾರಿಗಳ ಬಂಧನ

CRIME- ARREST

ದೆಹಲಿ : ರಾಜಸ್ಥಾನದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಕಾರ್ಯಾಚರಣೆ ನಡೆದಿರುವಂತೆಯೇ, ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇಬ್ಬರು ಇಡಿ ಅಧಿಕಾರಿಗಳನ್ನೂ ಬಂಧಿಸಿದೆ.

ಗುರುವಾರ ಅಲ್ವಾರ್‌ನಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳಾದ ನೌಲ್ ಕಿಶೋರ್ ಮೀನಾ ಮತ್ತು ಅವರ ಸಹಾಯಕರನ್ನು ಬಂಧಿಸಿದೆ. ಮಣಿಪುರದ ಚಿಟ್ ಫಂಡ್ ಕಂಪನಿಯೊಂದರ ಪ್ರಕರಣ ಸಂಬಂಧಿಸಿದಂತೆ ಮಹಿಳೆಗೆ 17 ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸುತ್ತಿದ್ದ ವೇಳೆ ಇಡಿ ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಸಿಬಿ ಮೂಲಗಳು ತಿಳಿಸಿವೆ.