ಬಿಗ್ ಬಾಸ್ ಕನ್ನಡ ಸೀಸನ್ 11: ಪ್ರಶಸ್ತಿ ಗೆದ್ದ ಹನುಮಂತ

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಹಳ್ಳಿ ಹೈದ ಹನುಮಂತ ವಿಜೇತರಾಗಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಎಂಟ್ರಿಕೊಟ್ಟಿದ್ದ ಹನುಮಂತ ಪ್ರಶಸ್ತಿ ಗೆದ್ದು ಅಚ್ಚರಿ ಮೂಡಿಸಿದೆ.
ಟಾಪ್ ಐವರ ಪೈಕಿ ಉಗ್ರಂ ಮಂಜು, ರಜತ್ ಮತ್ತು ಮೋಕ್ಷಿತ ಒಬ್ಬೊಬ್ಬರಾಗಿಯೇ ಹೊರನಡೆದರು. ಅಂತಿಮವಾಗಿ ತ್ರಿವಿಕ್ರಮ್ ಮತ್ತು ಹನುಮಂತ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕಿಚ್ಚ ಸುದೀಪ್ ಅವರು ಹನುಮಂತ ಅವರ ಗೆಲುವನ್ನು ಪ್ರಕಟಿಸುವ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 11ರ ಕುತೂಹಲಕ್ಕೆ ತೆರೆ ಬಿದ್ದಿದೆ.