‘ಪೂರ್‌ ಲೇಡಿ’ ಹೇಳಿಕೆ: ಸೋನಿಯಾ ಗಾಂಧಿ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ

0
rahul-priyanka-Sonia-gandhi-300x183

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರು ನೀಡಿದ ‘ಪೂರ್‌ ಲೇಡಿ’ ಹೇಳಿಕೆ ಅತ್ಯಂತ ಖಂಡನೀಯ ಎಂದಿರುವ ಬಿಜೆಪಿ, ಈ ದೇಶದ ಆದಿವಾಸಿಗಳು, ದಲಿತರು ರಾಷ್ಟ್ರದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದರೆ, ಕಾಂಗ್ರೆಸ್‌ ಅದನ್ನು ಸಹಿಸುವುದಿಲ್ಲ ಎಂಬುದಕ್ಕೆ ಸೋನಿಯಾ ಗಾಂಧಿಯವರ ಕೀಳು ಹೇಳಿಕೆಯೇ ಸಾಕ್ಷಿ ಎಂದಿದೆ.

ಈ ದೇಶದ ಆದಿವಾಸಿ ಹಾಗೂ ದಲಿತ ಸಮುದಾಯದವರ ಬಗ್ಗೆ ಕಾಂಗ್ರೆಸ್‌ ಎಂತಹ ಮನಸ್ಥಿತಿ ಹೊಂದಿದೆ ಎಂಬುದಕ್ಕೆ ಬಹುಷಃ ಇದಕ್ಕಿಂತ ಬೇರೆ ಉದಾಹರಣೆ ಸಿಗುವುದಿಲ್ಲ ಎಂದು ಬಿಜೆಪಿ ಹೇಳಿದೆ.

ಸೋನಿಯಾ ಗಾಂಧಿಯವರು ತಮ್ಮ ಹೇಳಿಕೆಯ ಬಗ್ಗೆ ಕೂಡಲೇ ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.

Leave a Reply

Your email address will not be published. Required fields are marked *

You may have missed