ತುರ್ತು ನಿರ್ಗಮದ ಬಾಗಿಲುಗಳಿಲ್ಲದಿದ್ದರೆ ಸಾರ್ವಜನಿಕ ಸಾರಿಗೆ ವಾಹನಗಳಿಗೆ ಎಫ್‌ಸಿ ಇಲ್ಲ

0
Ramalinga Reddy

ಬೆಂಗಳೂರು: ಸಾಲು ಸಾಲು ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಎಚ್ಛೆತ್ತುಕೊಂಡಿದೆ. ಸಾರ್ವಜನಿಕ ಸಾರಿಗೆಗಳಲ್ಲಿ ತುರ್ತು ನಿರ್ಗಮದ ಬಾಗಿಲುಗಳಿಲ್ಲದಿದ್ದರೆ ಭೌತಿಕ ಕ್ಷಮತೆ ದೃಢೀಕರಣ ಪತ್ರ – ಎಫ್‌ಸಿ ಮಾಡದಿರಲು ನಿರ್ಧರಿಸಿದೆ.

ಸಾರ್ವಜನಿಕ ಸಾರಿಗೆಗಳಲ್ಲಿ ತುರ್ತು ನಿರ್ಗಮದ ಬಾಗಿಲುಗಳಿಲ್ಲದಿದ್ದರೆ ಭೌತಿಕ ಕ್ಷಮತೆ ದೃಢೀಕರಣ ಪತ್ರ – ಎಫ್‌ಸಿ ಮಾಡದಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.

ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಬಸ್‌ಗಳಲ್ಲಿ ಯಾವುದೇ ರೀತಿಯ ಸ್ಫೋಟಕಗಳನ್ನು ಸಾಗಿಸಬಾರದು ಎಂದು ಕಟ್ಟಪ್ಪಣೆ ಮಾಡಿದ್ದೇವೆ. ಪ್ರಯಾಣಿಕರನ್ನು ಹೊರತುಪಡಿಸಿ ಅನಗತ್ಯವಾದ ಲಗೇಜ್‌ಗಳನ್ನು ಸಾಗಿಸದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed